ಗರೀಬ್ ರಥ್‌ಗೆ ಅಂಕೋಲ, ನೇತ್ರಾವತಿ ರೈಲಿಗೆ ಭಟ್ಕಳದಲ್ಲಿ ತಾತ್ಕಾಲಿಕ ನಿಲುಗಡೆ

ಉಡುಪಿ, ಮಾ.8: ಲೋಕಮಾನ್ಯ ತಿಲಕ್ ಹಾಗೂ ಕೊಚ್ಚುವೇಲು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಗರೀಬ್ ರಥ್ ರೈಲಿಗೆ ಉತ್ತರ ಕನ್ನಡದ ಅಂಕೋಲದಲ್ಲಿ ಹಾಗೂ ಲೋಕಮಾನ್ಯ ತಿಲಕ್- ತಿರುವನಂತಪುರಂ ಸೆಂಟ್ರಲ್ ನಡುವೆ ಸಂಚರಿಸುವ ದೈನಂದಿಕ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಭಟ್ಕಳ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
12202 ಕೊಚ್ಚುವೇಲು-ಲೋಕಮಾನ್ಯ ತಿಲಕ್ ಗರೀಬ್ ರಥ್‌ಗೆ ಮಾ.9ರಿಂದ ಅಂಕೋಲದಲ್ಲಿ ನಿಲುಗಡೆ ಇರುತ್ತದೆ. ರೈಲು ಸಾಮಾನ್ಯ ವೇಳಾ ಪಟ್ಟಿಯಂತೆ ಜೂನ್ 9ರವರೆಗೆ ರಾತ್ರಿ 11:26ಕ್ಕೆ ಅಂಕೋಲಕ್ಕೆ ಆಗಮಿಸಿ 11:28ಕ್ಕೆ ನಿರ್ಗಮಿಸಲಿದೆ. ಜೂ.11ರಿಂದ ಮಾನ್ಸೂನ್ ವೇಳಾಪಟ್ಟಿಯಂತೆ 11:42ಕ್ಕೆ ಆಗಮಿಸಿ 11:44ಕ್ಕೆ ನಿರ್ಗಮಿಸಲಿದೆ.
12201 ಲೋಕಮಾನ್ಯ ತಿಲಕ್- ಕೊಚ್ಚುವೇಲು ಗರೀಬ್ ರಥ್ ವಾರಕ್ಕೆ ಎರಡು ಬಾರಿಯ ಎಕ್ಸ್‌ಪ್ರೆಸ್ ರೈಲು ಮಾ.10ರಿಂದ ಸೆ.4ರವರೆಗೆ ಸಾಮಾನ್ಯ ವೇಳಾ ಪಟ್ಟಿಯಂತೆ ಬೆಳಗಿನ ಜಾವ 4:22ಕ್ಕೆ ಅಂಕೋಲಕ್ಕೆ ಆಗಮಿಸಿ 4:24ಕ್ಕೆ ನಿರ್ಗಮಿಸಲಿದೆ. ಮಾನ್ಸೂನ್ ವೇಳಾ ಪಟ್ಟಿಯಂತೆ ಬೆಳಗಿನ ಜಾವ 5:28ಕ್ಕೆ ಆಗಮಿಸಿ 5:30ಕ್ಕೆ ನಿರ್ಗಮಿಸಲಿದೆ.
ರೈಲು ನಂ.16345 ಮುಂಬಯಿ-ತಿರುವನಂತಪುರ ಸೆಂಟ್ರಲ್ ನೇತ್ರಾವತಿ ದೈನಂದಿನ ಎಕ್ಸ್‌ಪ್ರೆಸ್ ರೈಲಿಗೆ ಮಾ.9ರಿಂದ ಭಟ್ಕಳದಲ್ಲಿ ನಿಲುಗಡೆ ಇರುತ್ತದೆ. ರೈಲು ಸಾಮಾನ್ಯ ವೇಳಾ ಪಟ್ಟಿಯಂತೆ ಬೆಳಗಿನ ಜಾವ 1:20ಕ್ಕೆ ಭಟ್ಕಳ ತಲುಪಿ 1:22ಕ್ಕೆ ನಿರ್ಗಮಿಸಲಿದೆ.ಮಾನ್ಸೂನ್ ವೇಳಾ ಪಟ್ಟಿಯಂತೆ ಬೆಳಗಿನ ಜಾವ 2:32ಕ್ಕೆ ಭಟ್ಕಳಕ್ಕೆ ಬಂದು 2:34ಕ್ಕೆ ನಿಗರ್ಮಿಸಲಿದೆ.
ರೈಲು ನಂ.16346 ತಿರುವನಂತಪುರ ಸೆಂಟ್ರಲ್- ಮುಂಬಯಿ ನೇತ್ರಾವತಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಸಾಮಾನ್ಯ ವೇಳಾ ಪಟ್ಟಿಯಂತೆ ಬೆಳಗಿನ ಜಾವ 1:40ಕ್ಕೆ ಭಟ್ಕಳಕ್ಕೆ ಬಂದು 1:42ಕ್ಕೆ ತೆರಳಲಿದೆ. ಇನ್ನೂ ಮಾನ್ಸೂನ್ ವೇಳಾ ಪಟ್ಟಿಯಂತೆ ಮಧ್ಯರಾತ್ರಿ 12:44ಕ್ಕೆ ಬಂದು 12:46ಕ್ಕೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.