ಅಡುಗೆ ಅನಿಲದರ ಇಳಿಕೆಗೆ ಐಯುಎಂಎಲ್ ಜಿಲ್ಲಾ ಸಮಿತಿ ಆಗ್ರಹ

ಮಂಗಳೂರು, ಮಾ.8: ಅಡಿಗೆ ಅನಿಲ ದರ ಇಳಿಸುವಂತೆ ಆಗ್ರಹಿಸಿ ಇಂಡಿಯನ್ ಮುಸ್ಲಿಂ ಲೀಗ್‌ನ ದ.ಕ. ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಸಮಿತಿಯ ಅಧ್ಯಕ್ಷ ಸಿ.ಅಬ್ದುಲ್ ರಹಮಾನ್ ನೇತೃತ್ವದ ನಿಯೋಗವು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಕೇಂದ್ರ ಸರಕಾರವು ಗೃಹ ಬಳಕೆಯ ಅಡುಗೆ ಅನಿಲಕ್ಕೆ 50 ರೂ., ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲಕ್ಕೆ ಒಂದೇ ಬಾರಿ 350 ರೂ. ಏರಿಕೆ ಮಾಡಿರುತ್ತದೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕೇಂದ್ರ ಸರಕಾರ ಕೈಗೆಟಕುವ ರೀತಿಯಲ್ಲಿ ಅಡುಗೆ ಅನಿಲ ಪೂರೈಕೆ ಮಾಡುವ ಭರವಸೆ ನೀಡಿದ್ದರೂ, ಆ ರೀತಿ ನಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನಿಯೋಗದಲ್ಲಿ ಹಾಜಿ ಮೊಹಮ್ಮದ್ ಬಿ.ಎ, ಎ.ಎಸ್.ಇಬ್ರಾಹೀಂ ಕರೀಂ, ಬಶೀರ್ ಉಳ್ಳಾಲ್, ರಿಯಾಝ್ ಹರೇಕಳ, ಮೊಹಮ್ಮದ್ ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.
Next Story