Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸಾಧಕರ ಸಾಧನೆಯ ಹಿಂದೆ ತಾಯಿಯ ಕೊಡುಗೆ...

ಸಾಧಕರ ಸಾಧನೆಯ ಹಿಂದೆ ತಾಯಿಯ ಕೊಡುಗೆ ದೊಡ್ಡದು : ನ್ಯಾಯಾಧೀಶೆ ಶೋಭಾ ಬಿ.ಜಿ.

ಮಹಿಳಾ ಕಲೋತ್ಸವ ಕಾರ್ಯಕ್ರಮ

8 March 2023 7:13 PM IST
share
ಸಾಧಕರ ಸಾಧನೆಯ ಹಿಂದೆ ತಾಯಿಯ ಕೊಡುಗೆ ದೊಡ್ಡದು : ನ್ಯಾಯಾಧೀಶೆ ಶೋಭಾ ಬಿ.ಜಿ.
ಮಹಿಳಾ ಕಲೋತ್ಸವ ಕಾರ್ಯಕ್ರಮ

ಮಂಗಳೂರು: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ. ಯಾರು ಸಾಧನೆ ಏನು ಸಾಧನೆ ಮಾಡಿ ದರೂ ಅದರ ಹಿಂದಿನ ಶಕ್ತಿ ತಂದೆ ಮತ್ತು ತಾಯಿ. ಅದರಲ್ಲೂ ತಾಯಿಯ ಕೊಡುಗೆ ಅನನ್ಯ. ನಾವು ಎಲ್ಲ ಕ್ಷೇತ್ರಗಳ ಸಾಧಕರನ್ನು ಹುಡುಕುತ್ತೇವೆ. ಆದರೆ ಮನೆಯಲ್ಲಿ ನಮ್ಮನ್ನು ಸಾಧಕರನ್ನಾಗಿ ರೂಪಿಸಿದವರ ಬಗ್ಗೆ ನಾವು  ಯೋಚಿಸುವುದಿಲ್ಲ  ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಅಭಿಪ್ರಾಯಪಟ್ಟರು.

ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ(ರಿ) ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆದ ಮಹಿಳಾ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿರುವ ಸೌಲಭ್ಯಗಳ ಮಾಹಿತಿ ಇನ್ನೂ ಮಹಿಳೆಯರಿಗೆ  ತಲುಪಿಲ್ಲ. ಕಾನೂನು ಸೇವಾ ಪ್ರಾಧಿಕಾರದಲ್ಲಿ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ಪಡೆಯುವ ಅವಕಾಶ ಇದೆ. ಅದರಲ್ಲಿ ಶ್ರೀಮಂತರು , ಬಡವರು, ಮಧ್ಯಮವರ್ಗದವರು  ಎಂಬ ಭೇದವಿಲ್ಲದೆ ಎಲ್ಲರೂ  ಇದರ ಪ್ರಯೋಜನ ಪಡೆಯಬಹುದಾಗಿದೆ  ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಬಹಳಷ್ಟು ಸೌಲಭ್ಯಗಳಿವೆ. ನೊಂದ ಮಹಿಳೆಯರು ತಮಗಾಗುತ್ತಿರುವ ತೊಂದರೆಯ ಬಗ್ಗೆ ಮತ್ತು ಯಾರಿಂದ ತೊಂದರೆಯಾಗುತ್ತಿದೆ ಎನ್ನುವ ವಿವರವನ್ನು ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಪತ್ರ ಬರೆದು ಅಥವಾ ದೂರವಾಣಿ ಮೂಲಕ ತಿಳಿಸಿದರೆ ಸಾಕು. ನೊಂದವರು ನ್ಯಾಯಾಲಯಕ್ಕೆ , ಪೊಲೀಸ್ ಸ್ಟೇಷನ್‌ಗೆ ಹೋಗಬೇಕಾಗಿಲ್ಲ. ಮುಂದಿನ ಎಲ್ಲ ಪ್ರಕ್ರಿಯೆಯನ್ನು  ಕಾನೂನು ಸೇವಾ ಪ್ರಾಧಿಕಾರ ನೋಡಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬ್ಯಾಂಕ್ ಆಫ್ ಬರೋಡದ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಅವರು ಮಾತನಾಡಿ ಮಹಿಳೆಯರಿಗೆ ಉದ್ಯಮವನ್ನು ಪ್ರಾರಂಭಿಸಲು ಬಹಳಷ್ಟು ಅವಕಾಶ ಇದೆ. ಸರಕಾರ ಮಹಿಳೆಯರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ವಿವಿಧ ಯೋಜನೆಗಳಡಿ ನೆರವು ನೀಡುತ್ತಿದೆ. ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಎಂದರು.

ಮಹಿಳೆಯರು ಮಾಹಿತಿಗಾಗಿ ತಮ್ಮ ಮಂಗಳೂರು ವಲಯ ಕಚೇರಿ ವ್ಯಾಪ್ತಿಯಲಿರುವ 23 ಜಿಲ್ಲೆಗಳ 380 ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಮಹಿಳಾ ಶಕ್ತಿ ಎಸ್‌ಬಿ  ಅಕೌಂಟ್ ತೆರೆಯುವಂತೆ ಸಲಹೆ ನೀಡಿದ ಅವರು ಉಳಿತಾಯ ಮಾಡುವುದರಲ್ಲಿ ಪುರುಷರಿಗಿಂತ ಮಹಿಳೆಯರು ಮುಂದೆ ಇದ್ದಾರೆ. ಅವರು ಉಳಿತಾಯ ಮನೋಭಾವದ ಬೆನ್ನಲುಬು ಆಗಿದ್ದಾರೆ ಎಂದರು.

ಗಂಡು ಮಗು ಹುಟ್ಟಿದ ತಕ್ಷಣ ಆತನನ್ನು ಡಾಕ್ಟರ್ ಹಾಗೂ ಇಂಜಿನಿಯರ್ ಆಗಿ ರೂಪಿಸುವ ಕನಸು ಕಾಣುವಂತೆ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸಲು  ಶ್ರಮಿಸಬೇಕು ಎಂದರು.

ಮಹಿಳೆಯರು ಕುಟುಂಬದ ಹಿತದ ಕಡೆಗೆ ಮಾತ್ರ ಗಮನ ನೀಡದೆ ತಮ್ಮ ಆರೋಗದ ರಕ್ಷಣೆ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮಹಿಳೆಯರ ಸತತ ಪ್ರಯತ್ನದ ಮೂಲಕ ದ.ಕ. ಜಿಲ್ಲಾ ಮಹಿಳಾ ಒಕ್ಕೂಟ ಬೆಳೆದಿದೆ. ಮಹಿಳೆಯರನ್ನು  ಸಮಾಜದ ಮುಖ್ಯವಾಹಿನಿಯಲ್ಲಿ ತರುವಲ್ಲಿ ಒಕ್ಕೂಟ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು. ದ.ಕ.ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪೂರ್ಣಿಮಾ ಮಹಿಳಾ ಸಾಧಕರನ್ನು ಸನ್ಮಾನಿಸಿದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರಾದ ಶಾರದಾ ಮಣಿಶೇಖರ್, ಶಿಲ್ಪಾ ಘೋರ್ಪಡೆ, ಆರ್.ರಾಧಿಕಾ, ಕಲಾವತಿ, ಕ್ಲಾರಾ ಡಿ ಕುನ್ಹಾ, ನಯನಾ ರೈ, ಶಾಂತಾ ಕುಮಾರಿ, ಸುಹನಾ ಮರಿಯಮ್, ಅನುಪಮಾ ಪ್ರಸಾದ್, ಸುಕನ್ಯಾ, ವಿಜಯಲಕ್ಷ್ಮೀ, ರಜನಿ ಸುಭಾಕರ್, ಡಾ.ವೀಣಾ ಭಟ್, ಪ್ರತಿಭಾ ಸಾಲ್ಯಾನ್ ಇವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸುಮಲತಾ ಎನ್.ಸುವರ್ಣ  ಲೋಗೋ ಅನಾವರಣಗೊಳಿಸಿದರು.

ಕರಾವಳಿ ಲೇಖಕಿಯರ -ವಾಚಕೀಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರ್ ದಿಕ್ಸೂಚಿ ಭಾಷಣ ಮಾಡಿದರು.
ಮಹಿಳಾ ಜಾಥಾ: ಮಹಿಳಾ ಕಲೋತ್ಸವಕ್ಕೂ ಮೊದಲು  ನಗರದ ಅಂಬೇಡ್ಕರ್ ವೃತ್ತದಿಂದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಮಹಿಳಾ ಜಾಥಾ ನಡೆಯಿತು. 

ಈ ಜಾಥಾದಲ್ಲಿ ಸೈಕಲ್, ದ್ವಿಚಕ್ರ ವಾಹನ, ರಿಕ್ಷಾ, ಕಾರು, ಬಸ್, ಟ್ರಕ್ ಚಲಾಯಿಸಿಕೊಂಡು  ಮಹಿಳೆಯರು ಆಗಮಿಸಿದರು. ಕಂಬಳದ ಕೋಣಗಳು,  ಮಹಿಳಾ ಚೆಂಡೆ ತಂಡ, ನಾಸಿಕ್ ಬ್ಯಾಂಡ್ ಮತ್ತು ದೇಶಕ್ಕಾಗಿ ನಾಡಿಗಾಗಿ ಹೋರಾಟ ನಡೆಸಿದ ಮಹಿಳೆಯರ ಶೌರ್ಯ ಪ್ರದರ್ಶನವನ್ನು ಬಿಂಬಿಸುವ ವೇಷಭೂಷಣಗಳನ್ನು ತೊಟ್ಟ ಮಹಿಳಾ ಕಲಾ ತಂಡಗಳು, ಕುದುರೆ ಏರಿ   ಮಹಿಳೆಯೊಬ್ಬರು  ಆಗಮಿಸುವ ಮೂಲಕ ಜಾಥಾಲ್ಲಿ  ಗಮನ ಸೆಳೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ(ರಿ) ಸ್ಥಾಪಕಾಧ್ಯಕ್ಷೆ  ಸರಳಾ ಕಾಂಚನ್, ಗೌರವಾಧ್ಯಕ್ಷೆ ಹರಿಣಿ ಸದಾಶಿವ, ಉಪಾಧ್ಯಕ್ಷೆ ಉಷಾ ನಾಯಕ್, ಪ್ರಧಾನ ಕಾರ್ಯದರ್ಶಿ ಮನೋರಮ ಉಮೇಶನ್, ಕಾರ್ಯದರ್ಶಿ ಶಾಂತಾ ಬಂಗೇರ, ಖಚಾಂಚಿ ಚಂದ್ರಾಕ್ಷಿ ರೈ, ಕ್ರೀಡಾ ಕಾರ್ಯದರ್ಶಿ  ಶುಭ ರೈ, ಸ್ಮರಣ ಸಂಚಿಕೆ ಸಂಪಾದಕಿ ಸುಖಲಾಕ್ಷೀ ಸುವರ್ಣ, ಗೌರವ ಸಲಹೆಗಾರರಾದ ಪ್ರೇಮಲತಾ ರಾವ್ ಮತ್ತು ವಿಜಯಲಕ್ಷ್ಮೀ ಬಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ರೇಖಾ ಶೆಟ್ಟಿ ಉಪಸ್ಥಿತರಿದ್ದರು.

share
Next Story
X