ಮಹಿಳಾ ಕಾಂಗ್ರೆಸ್‌ನಿಂದ ಮಹಿಳಾ ದಿನಾಚರಣೆ

ಮಂಗಳೂರು: :ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ದಕ್ಷಿಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಮಹಿಳಾ ಕುಟುಂಬ ಮಿಲನ ಕಾರ್ಯಕ್ರಮ ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಮಾಜಿ ಶಾಸಕ ಜೆ.ಆರ್. ಲೋಬೊ, ಎಐಸಿಸಿ ಸದಸ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿದರು. ಈ ಸಂದರ್ಭ ಹಿರಿಯ ಕಾಂಗ್ರೆಸ್ ನಾಯಕಿ ಮೇಝಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಸುರೇಖಾ ಚಂದ್ರಹಾಸ್, ಗೀತಾ ಅತ್ತಾವರ , ಪ್ರಭಾಕರ ಶ್ರೀಯಾನ್, ಭಾಸ್ಕರ್ ರಾವ್, ಲಕ್ಷ್ಮಿನಾಯರ್, ಜೆಸಿಂತಾ ವಿಜಯ್ ಆಲ್ಫ್ರೆಡ್, ಚಂದ್ರಕಲಾ ಡಿ. ರಾವ್, ಕವಿತಾ ವಾಸು, ಸಬಿತಾ ಮಿಸ್ಕಿತ್, ಪ್ರವಿತಾ ಕರ್ಕೇರ, ಗೀತಾ ಪ್ರವೀಣ್, ಸುಜತಾ ಶಾಲಿನಿ, ವಿದ್ಯಾ, ಮೆಬಲ್ ನೊರೊನ್ಹಾ ಮತ್ತಿತರರು ಉಪಸ್ಥಿತಿತರಿದ್ದರು.
ಮಂಗಳೂರು ದಕ್ಷಿಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ ಜೋಗಿ ಸ್ವಾಗತಿಸಿದರು. ಕಾರ್ಯದರ್ಶಿ ಜ್ಯೋತಿ ಅಶೋಕ ಕಾರ್ಯಕ್ರಮ ನಿರೂಪಿಸಿದರು.





