ದಾವಣಗೆರೆ: ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಹರಿಹರ (ದಾವಣಗೆರೆ): ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಮಹಿಳಾ ಹಾಸ್ಟೆಲ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ಮಂಗಳವಾರ ಮದ್ಯಾಹ್ನ ವರದಿಯಾಗಿದೆ.
ನಗರದ ಡಾ.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ದಾವಣಗೆರೆ ತಾಲೂಕಿನ ಎಚ್.ಬಸವಾಪುರ ನಿವಾಸಿ ಶಿವಣ್ಣ ಎಂಬುವರ ಪುತ್ರಿ ವರ್ಷ (18) ಮೃತ ದುರ್ದೈವಿ.
ಇಬ್ಬರು ಇರುವ ಹಾಸ್ಟೆಲ್‍ನ ಕೊಠಡಿಯಲ್ಲಿನ ಸಹಪಾಠಿ ಪಕ್ಕದ ಕೊಠಡಿಗೆ ಹೋಗಿದ್ದರು. ಮಧ್ಯಾಹ್ನ 12ರ ಸುಮಾರಿಗೆ ಕೊಠಡಿಯ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ವರ್ಷ ಕಂಡು ಬಂದಿದ್ದಾಳೆ. ಆಗ ತಕ್ಷಣ ಹಾಸ್ಟೆಲ್‍ನ ಸಿಬ್ಬಂದಿ ಕೊಠಡಿ ಪ್ರವೇಶಿಸಿ ಕೆಳಗಿಳಿಸಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ್ದ ಮೃತ ವಿದ್ಯಾರ್ಥಿನಿಯ ಪೋಷಕರು ಮಗಳ ಸಾವಿಗೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣ, ಅವರನ್ನು ಅಮಾನತ್ತು ಪಡಿಸಬೇಕೆಂದು ಆಗ್ರಹಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಏನು ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.





