ಕೆಎಸ್‌ಸಿಎ ಕ್ರಿಕೆಟ್ : ನೇತಾಜಿ-ಬ್ರಹ್ಮಾವರ ತಂಡಗಳು ಫೈನಲಿಗೆ

ಮಂಗಳೂರು, ಮಾ.8: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ನಡೆದಿರುವ ಎರಡನೆ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡಗಳು ಅಂತಿಮ ಹಂತವನ್ನು ಪ್ರವೇಶಿಸಿದೆ.
ಮಂಗಳೂರಿನ ಎನ್‌ಎಂಪಿಟಿ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರಗಿದ ಉಪಾಂತ್ಯ ಪಂದ್ಯಗಳಲ್ಲಿ ನೇತಾಜಿ ತಂಡವು ಆರ್.ಎಫ್.ಸಿ ಉಚ್ಚಿಲ್ಲ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮತ್ತು ಬ್ರಹ್ಮಾವರ ತಂಡ, ಸಿಎಫ್‌ಸಿ ಉಲ್ಲಾಳ ತಂಡವನ್ನು 215 ರನ್‌ಗಳ ಅಂತರದಿಂದ ಪರಾಭವಗೊಳಿಸಿದವು.
Next Story