ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಚಾರಕ್ಕೆ ಚಾಲನೆ

ಮಂಗಳೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ನೀಡಲಾಗುವ ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳ ಪ್ರಚಾರಾರ್ಥ ನಗರದಲ್ಲಿ ಅಟೋ ರಿಕ್ಷಾಗಳಿಗೆ ಭಿತ್ತಪತ್ರ ಅಂಟಿಸುವ ಅಭಿಯಾನಕ್ಕೆ ಬುಧವಾರ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಚಾಲನೆ ನೀಡಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್‌ರ ಸೂಚನೆಯಂತೆ ಮಂಗಳೂರು ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಚಂದ್ರಪಾಲ್, ಯುವ ಮುಖಂಡರಾದ ಸುಹೈಲ್ ಕಂದಕ್, ಗಿರೀಶ್ ಆಳ್ವ, ಸಮೀರ್ ಕಾಟಿಪಳ್ಳ, ಆಲ್ವಿನ್ ಪ್ರಕಾಶ್, ಅಬ್ದುಲ್ ಅಝೀಝ್ ಬಾಷಾ, ಅಝೀಝ್ ಕಂದಾವರ, ಫಯಾಝ್ ಅಮ್ಮೆಮ್ಮಾರ್ ನೇತೃತ್ವದಲ್ಲಿ 176 ಅಟೋ ರಿಕ್ಷಾಗಳಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ ಭಿತ್ತಿಪತ್ರವನ್ನು ಅಂಟಿಸಲಾಯಿತು.
Next Story