ಮನಪಾ ರೂ.222 ಕೋಟಿ ಮಿಗತೆ ಬಜೆಟ್ ಮಂಡನೆ

ಮಂಗಳೂರು,ಮಾ.9; ಮಂಗಳೂರು ಮಹಾನಗರ ಪಾಲಿಕೆಯ 2023-24ನೆ ಸಾಲಿಗೆ 222.04ಕೋಟಿ ರೂ.ಮಿಗತೆ (ಆಯವ್ಯಯ ) ಬಜೆಟ್ ಗೆ ಸಭೆ ಅನುಮೋದನೆ ನೀಡಿತು. ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ಮೇಯರ್ ಜಯಾನಂದ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ 2023-24 ನೆ ಸಾಲಿನ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಡಿಸಿದರು.
2023-24 ನೆ ಸಾಲಿನ ಪ್ರಾರಂಭಿಕ ಶಿಲ್ಕು ರೂ.367.20 ಕೋಟಿ ಮತ್ತು ಆದಾಯ ರೂ.776 ಕೋಟಿ ಒಟ್ಟು ಆದಾಯ ರೂ.1143.61 ಕೋಟಿ .ವೆಚ್ಚ ಸೇರಿ ರೂ.921.57 ಕೋಟಿ ಅಂದಾಜಿಸಲಾಗಿದ್ದು ಅಂತಿಮವಾಗಿ ರೂ.222.04 ಕೋಟಿ ಮಿಗತೆ ಬಜೆಟ್ ನ್ನು ಕಿಶೋರ್ ಕೊಟ್ಟಾರಿ ಸಭೆಗೆ ಮಂಡಿಸಿದರು.
ಈ ಬಾರಿಯ ಮನಪಾ ಬಜೆಟ್ ನಲ್ಲಿ 12 ವಿಶೇಷ ಯೋಜನೆ ಗಳನ್ನು ನೀಡಿರುವುದಾಗಿ ಕಿಶೋರ್ ಕೊಟ್ಟಾರಿ ತಿಳಿಸಿದ್ದಾರೆ. ಈ ಯೋಜನೆಯಲ್ಲಿ ಮಳೆನೀರು ಮತ್ತು ಅಂತರ್ಜಲ ಸಂರಕ್ಷಣೆ, ಮಹಿಳೆಯರಿಗೆ ಸ್ವಾವಲಂಬಿ ಯೋಜನೆ, ವಿದ್ಯಾರ್ಥಿಗಳಿಗೆ ಜ್ಞಾನ ಸಿರಿ ಯೋಜನೆ, ವೀರ ಯೋಧರ ಕಲ್ಯಾಣ ಕ್ಕಾಗಿ ನಮ್ಮ ಯೋಧ ಯೋಜನೆ, ಸಿಬ್ಬಂದಿ ಗಳ ಆರೋಗ್ಯ ವಿಮೆ, ತುಳು ಭಾಷಾ ಅಭಿವೃದ್ಧಿಗೆ ಯೋಜನೆ, ಜನ ಸಾಮಾನ್ಯ ರಲ್ಲಿ ವೈಜ್ಞಾನಿಕ ಯೋಜನೆ ಗಳಿಗೆ ಪ್ರೋತ್ಸಾಹ, ಬೀದಿ ನಾಯಿ,ಪ್ರಾಣಿಗಳ ರಕ್ಷಣೆ ರಕ್ಷಕ ಯೋಜನೆ, ವಾರ್ಡಿಗೊಂದು ಪಾರ್ಕ್, ಮಂಗಳೂರು ಶ್ರೀ ಲಕ್ಷ್ಮೀ ಬೇಟಿ ಬಚಾವೋ ಯೋಜನೆ,ಸ್ವಚ್ಛ ಮಂಗಳೂರು ಜಾಗೃತಿ ಯೋಜನೆ, ಕೊಳಗೇರಿ ಅಭಿವೃದ್ಧಿ ವಿಶೇಷ ಯೋಜನೆ ಹಮ್ಮಿಕೊಂಡಿದೆ ಎಂದು ಕಿಶೋರ್ ತಿಳಿಸಿದ್ದಾರೆ.
ವಿಪಕ್ಷ ನಾಯಕ ನವೀನ್ ಡಿಸೋಜಾ ಮಾತನಾಡುತ್ತಾ, ಬಡವರ ಮನೆ ರಿಪೇರಿಗೆ ನೀಡಿದ ಅನುದಾನ ಕಡಿಮೆ ಅದನ್ನು ಮೊದಲು ಶ್ವೇತ ಪತ್ರ ಹೊರಡಿಸಬೇಕಾಗಿತ್ತು ಆದರೆ ಅದು ಆಗಿಲ್ಲ. ಈ ಬಜೆಟ್ ಸಮರ್ಪಕವಾಗಿ ಮಂಡನೆಯಾಗಿಲ್ಲ ತೃಪ್ತಿಕರವಾಗಿಲ್ಲ ಎಂದಿದ್ದಾರೆ.
ಮನಪಾ ಸದಸ್ಯ ಶಶಿ ಧರ ಹೆಗ್ಡೆ ಮಾತನಾಡಿ ಇದು ನೈಜ ಬಜೆಟ್ ಅಲ್ಲ. ತೆರಿಗೆ ಸರಳೀಕರಣದ ಪ್ರಸ್ತಾಪ ಇಲ್ಲ. ಜನರ ಮೇಲೆ ತೆರಿಗೆ ಹೆಚ್ಚಿದೆ ಅದೇ ರೀತಿ ಜನರಿಗೆ ಹೆಚ್ಚು ಹೆಚ್ಚು ಸೌಲಭ್ಯ ಗಳನ್ನು ನೀಡಬೇಕಿತ್ತು. ಈ ಬಜೆಟ್ ಹಳೆಬಾಟಲಿಯಲ್ಲಿ ಹೊಸ ಮದ್ಯ ತುಂಬಿಸಿದಂತಾಗಿದೆ ಎಂದರು.
ಮನಪಾ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.
ಆಡಳಿತ ಪಕ್ಷದ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಹಲವಾರು ಹೊಸ ಯೋಜನೆಗಳನ್ನು ಹೊಂದಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದರು.
ಆಡಳಿತ ಪಕ್ಷದ ಮುಖ್ಯ ಸಚೇತಕ ಪ್ರೇಮಾ ನಂದ ಶೆಟ್ಟಿ ಮಾತನಾಡಿ, ಆಡಳಿತ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣೆ ಗೆ ಸೀಮ್ಯಾಕ್ ವತಿಯಿಂದ ಅತ್ಯುತ್ತಮ ಮಹಾನಗರ ಪಾಲಿಕೆ ಮನಪಾಕ್ಕೆ ಒಂದು ಲಕ್ಷ ಪುರಸ್ಕಾರ ದೊರೆತಿದೆ. ಈ ಸಂದರ್ಭದಲ್ಲಿ ಮಿಗತೆ ಬಜೆಟ್ ಮಂಡಿಸಿದ ಮೇಯರ್ ರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಸಭೆಯ ವೇದಿಕೆಯಲ್ಲಿ ಉಪ ಮೇಯರ್ ಪೂರ್ಣಿಮಾ, ಮನಪಾ ಆಯುಕ್ತ ಚೆನ್ನ ಬಸಪ್ಪ .ಕೆ ಉಪಸ್ಥಿತರಿದ್ದರು.