ಬಿ.ಸಿ.ರೋಡ್ : ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಲಾರಿ ಢಿಕ್ಕಿ
ಚಾಲಕನಿಗೆ ಮೂರ್ಛೆ ರೋಗ ಬಾಧಿಸಿ ಅವಘಡ

ಚಾಲಕನಿಗೆ ಮೂರ್ಛೆ ರೋಗ ಬಾಧಿಸಿ ಅವಘಡ
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕಿಗೆ ನುಗ್ಗಿದ ಘಟನೆ ನಡೆದಿದೆ. ಲಾರಿ ಚಾಲಕನಿಗೆ ಚಾಲನೆ ಸಮಯದಲ್ಲಿ ಮೂರ್ಛೆ ರೋಗ ಬಾಧಿಸಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸರಣಿ ಅಪಘಾತ ನಡೆದರೂ ಅದೃಷ್ಟವಶಾತ್ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಲು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದ ಲಾರಿ ಬಳಿಕ ಬೈಕ್ ಸಹಿತ ರಸ್ತೆ ಬದಿ ನಿಲ್ಲಿಸಿದ್ದ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದು ನಂತರ ಪೆಟ್ರೋಲ್ ಬಂಕಿಗೆ ನುಗ್ಗಿದೆ.
ಮಂಗಳೂರು ಕಡೆಯಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಲಾರಿ ಚಾಲಕನಿಗೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಲಾರಿ ಚಾಲಕನನ್ನು ಲಕ್ಷಣ್ ಎಂದು ಗುರುತಿಸಲಾಗಿದೆ. ಈತನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
Next Story