ವಿವಿ ಪದವಿ ಪರೀಕ್ಷೆ: ಗೀತಾಂಜಲಿಗೆ ಪ್ರಥಮ ರ‍್ಯಾಂಕ್

ಬ್ರಹ್ಮಾವರ, ಮಾ.9: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಗೀತಾಂಜಲಿ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಗೀತಾಂಜಲಿ ಅವರು 2022ನೇ ಸಾಲಿನ ಬಿಎಸ್ಸಿ ಎಚ್.ಎಸ್.(ಹೊಟೇಲ್ ಮ್ಯಾನೇಜ್‌ಮೆಂಟ್) ಪದವಿ ಪರೀಕ್ಷೆಯಲ್ಲಿ ಶೇ.91 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿ ಶೈಕ್ಷಣಿಕ ಸಾಧನೆ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಡಾ.ಸೀಮಾ ಜಿ. ಭಟ್, ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ, ನಿರ್ದೇಶಿಕಿ ಮಮತಾ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.
Next Story





