ಕರಾವಳಿಯಲ್ಲಿ ಬಿಸಿಗಾಳಿ: ಪಣಂಬೂರಿನಲ್ಲಿ ತಾಪಮಾನ 38.8ಕ್ಕೆ ಏರಿಕೆ

ಮಂಗಳೂರು, ಮಾ.9: ಎರಡು ದಿನಗಳ ಕಾಲ ಕೊಂಕಣ ಗೋವಾ ಮತ್ತು ಕರಾವಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಗಾಳಿ ಬೀಸಿರುವುದು ವರದಿಯಾಗಿದೆ.
ಶುಕ್ರವಾರ ಕೂಡಾ ಬಿಸಿಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಣಂಬೂರಿನಲ್ಲಿ ಗರಿಷ್ಠ 38.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬಾಗಲಕೋಟೆಯಲ್ಲಿ ರಾಜ್ಯದಲ್ಲಿಯೇ ಕನಿಷ್ಠ ತಾಪಮಾನ 13.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಂಗಳೂರು ನಗರ 36.5 ಸರಾಸರಿ ಉಷ್ಣಾಂಶ ದಾಖಲಾಗಿದೆ. ಕಾರವಾರ 38.6, ಬ್ರಹ್ಮಾವರ (ಎಡಬ್ಲ್ಯುಎಸ್) 38.4, ಹೊನ್ನಾವರದಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಬಿಸಿಯಾದ ವಾತಾವರಣ ಇದೆ. ಪುತ್ತೂರು, ಕಡಬದಲ್ಲಿ ಹಲವರಿಗೆ ಬಿಸಿ ಗಾಳಿಯ ಅನುಭವ ಆಗಿದೆ ಎಂದು ತಿಳಿದು ಬಂದಿದೆ.
Next Story