ಮಾ.10: ಅಡ್ಡೂರು ಬದ್ರಿಯಾ ಮಸೀದಿಯ ನೂತನ ಕಟ್ಟಡ ಉದ್ಘಾಟನೆ
ಸರ್ವ ಧರ್ಮೀಯರಿಗೆ ಮಸೀದಿ ವೀಕ್ಷಣೆಗೆ ಅವಕಾಶ

ಸರ್ವ ಧರ್ಮೀಯರಿಗೆ ಮಸೀದಿ ವೀಕ್ಷಣೆಗೆ ಅವಕಾಶ
ಮಂಗಳೂರು, ಮಾ.9: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಜಂಕ್ಷನ್‌ನಲ್ಲಿರುವ ಬದ್ರಿಯಾ ಮಸೀದಿಯ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಮಾ.10ರಂದು ಸಂಜೆ 3ಕ್ಕೆ ಬದ್ರಿಯಾ ಜಮಾಅತ್ ಕಮಿಟಿಯ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಶೀರ್ವಚನ ನೀಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.
ಮಾ.11 ಮತ್ತು 12ರಂದು ಸೌಹಾರ್ದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನವೀಕೃತ ಮಸೀದಿಯ ಉದ್ಘಾಟನೆ ಕಾರ್ಯಕ್ರಮ ಮಾ.10ರಂದು ನಡೆಯಲಿದ್ದು, ಗುರುವಾರ ಸರ್ವ ಧರ್ಮೀಯರಿಗೆ ಮಸೀದಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭ ನೂರಾರು ಮಂದಿ ಮಸೀದಿ ವೀಕ್ಷಿಸಿ ಮಸೀದಿಗಳ ಕುರಿತ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
Next Story