’ಸಮಸ್ತ’ ಆದರ್ಶ ಸಮ್ಮೇಳನ ಯಶಸ್ವಿಗೆ ಖುತಬಾ ಸಮಿತಿ ಕರೆ

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮದ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ತಂಳ್‌ರ ನೇತೃತ್ವದಲ್ಲಿ ಎಸ್ಕೆಎಸೆಸ್ಸೆಫ್ ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಮಾ.10ರಂದು ಬಿ.ಸಿ.ರೋಡ್ ಕೈಕಂಬ ಪೂಂಜಾ ಮೈದಾನದಲ್ಲಿ ಶೈಖುನಾ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ನಡೆಯುವ ಸಮಸ್ತ ಆದರ್ಶ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸಮಸ್ತ ಜಂ ಇಯ್ಯತುಲ್ ಖುತಬಾ ದ.ಕ. ಜಿಲ್ಲಾ ಸಮಿತಿ ಕರೆ ನೀಡಿದೆ.
ಜಿಲ್ಲೆಯ ಎಲ್ಲಾ ಖತೀಬರು ಭಾಗವಹಿಸುವುದರೊಂದಿಗೆ ಮೊಹಲ್ಲಾಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಕಾರ್ಯ ಪ್ರವೃತ್ತರಾಗಬೇಕೆಂದು ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ ಕೆಲಿಂಜ ಹಾಗೂ ಪ್ರಧಾನ ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story