ಎಸ್‍ಸಿಡಿಸಿಸಿ ಬ್ಯಾಂಕ್ : ಸಂಚಯ ಖಾತೆ ವೈಯಕ್ತಿಕ ಅಪಘಾತ ವಿಮಾ ವಿತರಣೆ
ಮಂಗಳೂರು: ಎಸ್‍ಸಿಡಿಸಿಸಿ ಬ್ಯಾಂಕ್‍ನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಪ್ರಾಮುಖ್ಯವಾದ ಯೋಜನೆ ಸಂಚಯ ಖಾತೆ ವೈಯಕ್ತಿಕ ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಸಂಚಯ ಖಾತೆದಾರ ಅಪಘಾತದಲ್ಲಿ ಮರಣ ಹೊಂದಿದರೆ ಖಾತೆದಾರರ ವಾರಿಸುದಾರರಿಗೆ ರೂ.2,00,000/- ಅಪಘಾತ ವಿಮೆ ಹಣ ದೊರೆಯುತ್ತದೆ.
ಇತ್ತೀಚೆಗೆ ಬ್ಯಾಂಕಿನ ದಾಮಸ್‍ಕಟ್ಟೆ ಶಾಖೆಯ ಸಂಚಯ ಖಾತೆದಾರರಾದ ಶ್ರೀಮತಿ ಆಶಾ ಮೂಲ್ಯ ಇವರು ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತಾರೆ. ಎಸ್‍ಸಿಡಿಸಿಸಿ ಬ್ಯಾಂಕಿನ ವೈಯಕ್ತಿಕ ಅಪಘಾತ ವಿಮಾ ಯೋಜನೆಯಡಿಯಲ್ಲಿ ಮೃತರ ವಾರಿಸುದಾರ ಮಗ ಪವನೀತ್ ಅವರಿಗೆ ರೂ.2,00,000/- ವಿಮಾ ಮೊತ್ತದ ಚೆಕ್‍ನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
Next Story





