ಮಲ್ಲೂರು: ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನ

ಸುರತ್ಕಲ್, ಮಾ.9: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಿನೂತನ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನಕ್ಕೆ ಇಂದು ಮಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಜನಮನ್ನಣೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇನಾಯತ್ ಅಲಿ, ನಾವು ಕಳೆದ ಎರಡು ದಿನಗಳಿಂದ ಪ್ರತಿ ಮನೆಗಳಿಗೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಮೇಲೆ ಜನರು ಭಾರೀ ನಿರೀಕ್ಷೆ ಇಟ್ಟಿದ್ದು, ಬಿಜೆಪಿಯ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಗ್ಯಾರಂಟಿ ಅಭಿಯಾನಕ್ಕೂ ಮುನ್ನ ಮಲ್ಲೂರು ಗ್ರಾಮದ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿ ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನದಲ್ಲಿ ನಿರೀಕ್ಷೆಗೂ ಮೀರಿ ಸಂಖ್ಯೆಯ ಕಾರ್ಯಕರ್ತರು ಸಾಥ್ ನೀಡಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್ ಆರ್.ಕೆ., ರಾಜ್ ಕುಮಾರ್ ಶೆಟ್ಟಿ ವಾಮಂಜೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯು.ಪಿ.ಇಬ್ರಾಹಿಂ, ಮಲ್ಲೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುದೀರ್ ರಾವ್, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಫೀದ್ ಅಡ್ಯಾರ್, ಎಮ್.ಕೆ.ಯೂಸುಫ್, ಅಫ್ಸತ್ ಪೆರ್ಮಂಕಿ, ಅಬೂಸಾಲಿ ದೆಮ್ಮಲೆ, ಸುಹೈಲ್ ಕಂದಕ್, ಅಬ್ದುಲ್ಲಾ ಮಲ್ಲೂರು, ಹಸನ್ ಬಾವ, ನೌಫಲ್ ಉದ್ದಬೆಟ್ಟು, ಅಶ್ರಫ್ ಅಡ್ಯಾರ್, ವೇಣುಗೋಪಾಲ್ ಮಲ್ಲೂರು, ಬದ್ರಿಯಾ ನಗರ, ಇಕ್ಬಾಲ್ ಕಿನ್ನಿಕಟ್ಟ, ಜಬ್ಬಾರ್ ಮಲ್ಲೂರು, ಅಶ್ರಫ್ ಬದ್ರಿಯಾ ನಗರ ಹಾಗೂ ಇನ್ನಿತರರು ಜೊತೆಗಿದ್ದರು.









