ಆಕ್ಷೇಪಣೆ ಪರಿಹರಿಸಲು ವಿಳಂಬ: ಹಣದ ಬದಲು ‘ವಕೀಲರೊಬ್ಬರ ವಗೈರೆಗಳು’ ಪುಸ್ತಕ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಮಾ.9: ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ತಕರಾರು ಅರ್ಜಿಗೆ ಕಚೇರಿ ಎತ್ತಿದ್ದ ಆಕ್ಷೇಪಣೆ ಪರಿಹರಿಸಲು ವಿಳಂಬ ಮಾಡಿದ ಅರ್ಜಿದಾರರೊಬ್ಬರಿಗೆ ಹಣದ ಬದಲಾಗಿ ಪುಸ್ತಕ ರೂಪದಲ್ಲಿ ದಂಡ ಕಟ್ಟಲು ಹೈಕೋರ್ಟ್ ಸೂಚಿಸಿದೆ.
ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರ ರಚಿಸಿರುವ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕವನ್ನು ದಂಡದ ರೂಪದಲ್ಲಿ ಕರ್ನಾಟಕ ನ್ಯಾಯಾಂಗ ಅಕಾಡಮಿಗೆ ನೀಡುವಂತೆ ತಕರಾರು ಅರ್ಜಿದಾರರಾದ ತುಮಕೂರಿನ ಭಾಗ್ಯನಗರದ ಮಹಾಲಕ್ಷ್ಮಮ್ಮ ಮತ್ತು ಜಿ.ಮಂಗಳಾ ಎಂಬುವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಹಾಗೆಯೇ, ಒಂದು ವಾರದೊಳಗೆ ಕಚೇರಿ ಆಕ್ಷೇಪಣೆಯನ್ನು ಪರಿಹರಿಸುವಂತೆ ಸೂಚಿಸಿದೆ. ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಮ್ಮ ಮತ್ತು ಜಿ.ಮಂಗಳಾ ಹೈಕೋರ್ಟ್‍ಗೆ 2022ರಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಕುರಿತು ಹೈಕೋರ್ಟ್ ಕಚೇರಿಯು ಕೆಲ ಆಕ್ಷೇಪಣೆ ಎತ್ತಿತ್ತು.
Next Story





