ನಾಲ್ಕನೇ ಟೆಸ್ಟ್: ಆಸ್ಟ್ರೇಲಿಯಾ ಆಟಗಾರರು ಕಪ್ಪು 'ಆರ್ಮ್ ಬ್ಯಾಂಡ್' ಧರಿಸಲು ಕಾರಣವೇನು?

ಅಹ್ಮದಾಬಾದ್: ಅಹ್ಮದಾಬಾದ್‌ನಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಾಟದ ವೇಳೆ ಆಸ್ಟ್ರೇಲಿಯಾ ಆಟಗಾರರು ಕಪ್ಪು ಬಣ್ಣದ ಆರ್ಮ್ ಬ್ಯಾಂಡ್‌ಗಳನ್ನು ಧರಿಸಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat cummins) ಅವರ ತಾಯಿ ಮರಿಯಾ ಕಮಿನ್ಸ್ ಅವರು ಕಳೆದ ರಾತ್ರಿ ನಿಧನರಾಗಿರುವುದರಿಂದ ಅವರಿಗೆ ಗೌರವಸೂಚಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ತಮ್ಮ ತಾಯಿ ಕಳೆದ ಕೆಲ ವಾರಗಳಿಂದ ತೀವ್ರ ಅಸೌಖ್ಯಕ್ಕೀಡಾಗಿದ್ದಾರೆ ಎಂದು ಇತ್ತೀಚೆಗಷ್ಟೇ ಪ್ಯಾಟ್ ಕಮಿನ್ಸ್ ತಿಳಿಸಿದ್ದರು. ಮರಿಯಾ ಕಮಿನ್ಸ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು 2005 ರಲ್ಲಿ ಪತ್ತೆಯಾಗಿತ್ತು.
ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದ ಕಮಿನ್ಸ್ ನಂತರ ಪ್ಯಾಲಿಯೇಟಿವ್ ಆರೈಕೆಯಲ್ಲಿದ್ದ ತಮ್ಮ ತಾಯಿಯ ಜೊತೆಗಿರಲು ಸಿಡ್ನಿಗೆ ತೆರಳಿದ್ದರು.
ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
Next Story