ಅಮೆರಿಕಾದ ಕ್ರೂಸ್ ಹಡಗಿನಲ್ಲಿ ನಿಗೂಢ ರೀತಿಯಲ್ಲಿ ಅನಾರೋಗ್ಯಕ್ಕೀಡಾದ ಇನ್ನೂರಕ್ಕೂ ಅಧಿಕ ಪ್ರಯಾಣಿಕರು!

ವಾಷಿಂಗ್ಟನ್: ಪ್ರಿನ್ಸೆಸ್ ಕ್ರೂಸಸ್‌ನ ರೂಬಿ ಪ್ರಿನ್ಸೆಸ್ ಹಡಗಿನಲ್ಲಿ ಇತ್ತೀಚೆಗೆ 300ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ನಿಗೂಢ ರೀತಿಯಲ್ಲಿ ಅನಾರೋಗ್ಯಕ್ಕೊಳಗಾಗಿದ್ದರು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ತಿಳಿಸಿದೆ.
ಟೆಕ್ಸಾಸ್‌ನಿಂದ ಮೆಕ್ಸಿಕೋಗೆ ಹೋಗಿ ಅಲ್ಲಿಂದ ಫೆಬ್ರವರಿ 26 ಹಾಗೂ ಮಾರ್ಚ್ 5 ರ ನಡುವೆ ವಾಪಸಾಗುವಾಗ ಈ ಘಟನೆ ನಡೆದಿದೆ.
ಹಡಗಿನಲ್ಲಿದ್ದ 2,881 ಪ್ರಯಾಣಿಕರ ಪೈಕಿ 284 ಮಂದಿ ಅಂದರೆ ಶೇ. 10 ಮಂದಿ ಅಸೌಖ್ಯಕ್ಕೀಡಾಗಿದ್ದರು. ಹಡಗಿನ ಒಟ್ಟು 1,159 ಸಿಬ್ಬಂದಿಗಳ ಪೈಕಿ 34 ಮಂದಿ ಅಂದರೆ ಶೇ 3 ಮಂದಿ ಅಸೌಖ್ಯಕ್ಕೀಡಾಗಿದ್ದರು. ಹೆಚ್ಚಿನವರಿಗೆ ವಾಂತಿಬೇಧಿ ಉಂಟಾಗಿತ್ತು ಹಾಗೂ ಇಲ್ಲಿಯ ತನಕ ಇದಕ್ಕೆ ಕಾರಣ ತಿಳಿದು ಬಂದಿಲ್ಲ.
ಹಡಗಿನಲ್ಲಿ ಹಲವರಿಗೆ ಅಸೌಖ್ಯ ಕಾಡಿದ ನಂತರ ಸಿಬ್ಬಂದಿ ಸ್ವಚ್ಛತೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಿದ್ದರು.
ರೂಬಿ ಪ್ರಿನ್ಸೆಸ್ ಈ ಹಿಂದೆ ಕೂಡ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ಸಂಬಂಧ ಸುದ್ದಿಯಾಗಿತ್ತು 2020 ರಲ್ಲಿ ಈ ಹಡಗು ಆಸ್ಟ್ರೇಲಿಯಾದಲ್ಲಿ ಲಂಗರು ಹಾಕಿದ್ದ ಸಂದರ್ಭ ಅದರಲ್ಲಿ ನೂರಾರು ಮಂದಿ ಕೋವಿಡ್ ಸೋಂಕಿತರಿದ್ದರು.