ಮಂಗಳೂರು ವಿವಿ ಫಲಿತಾಂಶ: ಎಂಕಾಂನಲ್ಲಿ ದೀಪಾ ಭಟ್‍ಗೆ ಪ್ರಥಮ ರ‍್ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ವಿದ್ಯಾರ್ಥಿನಿಯಾಗಿದ್ದ ಪುತ್ತೂರಿನ ನಿವಾಸಿ ದೀಪಾ ಸಿ ಭಟ್, ಎಂಕಾಂ ವಿಭಾಗದ ಸೆಪ್ಟೆಂಬರ್/ಅಕ್ಟೋಬರ್ 2022ರ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.
ದೀಪಾ ಸಿ ಭಟ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪಾಂಗಾಳಾಯಿ ಬೆಥನಿ ಶಾಲೆಯಲ್ಲಿಯೂ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ. 10ನೇ ಮತ್ತು ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿಯೂ ಬಿಕಾಂನಲ್ಲಿ 4ನೇ ರ‍್ಯಾಂಕ್ ಪಡೆದಿರುತ್ತಾರೆ. ಅಲ್ಲದೇ ಎನ್‍ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಯಲ್ಲಿ ಶೇ.99ಅಂಕದೊಂದಿಗೆ ತೇರ್ಗಡೆಯಾಗಿ ದ್ದರು. ಪ್ರಸ್ತುತ ಮಾಹೆ ಮಣಿಪಾಲದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ.
ಅವರು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಚಂದ್ರಶೇಖರ್ ಯಸ್ ಭಟ್ ಮತ್ತು ಶ್ರೀದೇವಿ ಸಿ ಭಟ್ ಅವರ ಪುತ್ರಿ
Next Story