ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ: ಶೋಭಾ ಕರಂದ್ಲಾಜೆ

ಉಡುಪಿ : ರಾಜ್ಯ ರಾಜಕಾರಣಕ್ಕೆ ಮತ್ತೆ ಮರಳುವ ಯಾವುದೇ ನಿರ್ಧಾರ ಖಂಡಿತ ಇಲ್ಲ ಎಂದು ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ರಾಜ್ಯದ ಚುನಾವಣೆಯನ್ನು ಎಲ್ಲ ಸಮಿತಿ, ನಾಯಕರು ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಎದುರಿಸಬೇಕೆಂಬ ನಿಟ್ಟಿನಲ್ಲಿ ಪಕ್ಷ ನನಗೆ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಜವಾಬ್ದಾರಿಯನ್ನು ನೀಡಿದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ರಾಜ್ಯದ ನಾಯಕರ ಮುಖಂಡರ, ಶಾಸಕರು ಸಂಸದರ ಸಹಕಾರಬೇಕಾಗಿದೆ. ಅವರೆಲ್ಲರನ್ನು ಜೊತೆಯಲ್ಲಿ ಇಟ್ಟು ಕೊಂಡು ಈ ಚುನಾವಣೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮ ವನ್ನು ವಹಿಸುತ್ತೇನೆ ಎಂದರು.
ಕೊಂಕಣ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮಧ್ಯೆ ಸಂಘರ್ಷ ಮತ್ತು ತಾಂತ್ರಿಕ ಸಮಸ್ಯೆಯಿಂದ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ನಡೆದಿಲ್ಲ. ಈಗ ಅದಕ್ಕೆ 14.53 ಕೋಟಿ ಬಿಡುಗಡೆಯಾಗಿದೆ. ಇದೀಗ ಪರಿಷ್ಕರಿಸಿದ ಅಂದಾಜು ವೆಚ್ಚದಲ್ಲಿ ಸುಮಾರು 5.58 ಕೋಟಿ ರೂ. ಹೆಚ್ಚು ನೀಡಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಆದೇಶ ಹೊರಡಿಸಿದ್ದಾರೆ. ಆದಷ್ಟು ಬೇಗ ಇದರ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದರು.





