ಮಹಿಳಾ ದಿನಾಚರಣೆ: ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ ಸಾಧಕರಿಗೆ ಸನ್ಮಾನ

ಉಡುಪಿ, ಮಾ.10: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಮಂಗಳವಾರ ಮಹಿಳಾ ದಿನಾಚರಣೆಯ ಪ್ರಯಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಥೀಮ್ಸ್ ಬ್ಯುಟಿಕ್‌ನ ಆಡಳಿತ ನಿರ್ದೇಶಕಿ ರೇಷ್ಮಾ, ಬೆಳಕು ವೃದ್ಧಾಶ್ರಮದ ಸ್ಥಾಪಕಿ ಸುಜ್ಯೋತಿ ನೇತ್ರಾವತಿ ಕೈರನ್ನಾ, ಕಾರುಣ್ಯ ವಿಶೇಷ ಮಕ್ಕಳ ಶಾಲೆಯ ಮುಖ್ಯೋ ಪಾಧ್ಯಾಯಿನಿ ಆ್ಯಗ್ನೇಸ್ ಕುಂದರ್, ಆಟೋ ಚಾಲಕಿ ಹಾಗೂ ಆಶಾ ಕಾರ್ಯ ಕರ್ತೆ ರಾಜೀವಿ ಕುಂದರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸುಲ್ತಾನ್ ಉಡುಪಿ ಶಾಖಾ ಮೆನೇಜರ್ ಮುಹಮ್ಮದ್ ಅಜ್ಮಲ್, ಸೇಲ್ಸ್ ಮೆನೇಜರ್ ಇಲ್ಯಾಸ್ ವಯನಾಡ್, ವಾಚ್ ಇಂಚಾರ್ಜ್ ಅಬ್ದುಲ್ ರಶೀದ್ ಮುಲ್ಕಿ, ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
Next Story





