WPL: ಯುಪಿ ವಾರಿಯರ್ಸ್‌ಗೆ 139 ರನ್ ಗುರಿ ನೀಡಿದ ಆರ್‌ಸಿಬಿ

ಮುಂಬೈ, ಮಾ.10: ಅಗ್ರ ಸರದಿಯ ಆಟಗಾರ್ತಿ ಎಲ್ಲಿಸ್ ಪೆರ್ರಿ ಅರ್ಧಶತಕದ(52 ರನ್, 39 ಎಸೆತ)ಬಲದಿಂದ ಆರ್‌ಸಿಬಿ ತಂಡ ಯುಪಿ ವಾರಿಯರ್ಸ್ ಗೆಲುವಿಗೆ 139 ರನ್ ಗುರಿ ನೀಡಿದೆ.
ಶುಕ್ರವಾರ ನಡೆದ ಡಬ್ಲುಪಿಎಲ್‌ನ 8ನೇ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ನಾಯಕಿ ಸ್ಮತಿ ಮಂಧಾನ(4 ರನ್) ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಪೆರ್ರಿ ಹಾಗೂ ಸೋಫಿ ಡಿವೈನ್(36 ರನ್)ಹೊರತುಪಡಿಸಿ ಉಳಿದ ಆಟಗಾರ್ತಿಯರು ವಿಫಲರಾದ ಕಾರಣ ಆರ್‌ಸಿಬಿ 19.3 ಓವರ್‌ಗಳಲ್ಲಿ 138 ರನ್‌ಗೆ ಆಲೌಟಾಯಿತು. ಯುಪಿ ಪರ ಸೋಫಿ ಎಕ್ಲೆಸ್ಟೋನ್(4-13)ಹಾಗೂ ದೀಪ್ತಿ ಶರ್ಮಾ(3-26)ಏಳು ವಿಕೆಟ್ ಹಂಚಿಕೊಂಡರು.
Next Story





