ಪ್ರಶಾಂತ್ ಮಾಡಾಳ್ ವಿರುದ್ಧ ಮತ್ತೆರಡು ಎಫ್‍ಐಆರ್ ದಾಖಲು

ಬೆಂಗಳೂರು: ಶಾಸಕ ಕೆ.ಮಾಡಾಳ್ ವಿರುಪಾಕ್ಷಪ್ಪ ಪುತ್ರ ಬೆಂಗಳೂರು ಜಲಮಂಡಳಿಯ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕವಾಗಿ ಎರಡು ಎಫ್‍ಐಆರ್ ದಾಖಲಾಗಿದ್ದು, ಈ ಮೂಲಕ ಪ್ರಶಾಂತ್ ವಿರುದ್ಧ ಒಟ್ಟು ಮೂರು ಎಫ್‍ಐಆರ್ ದಾಖಲು ಮಾಡಲಾಗಿದೆ.
ಆರೋಪಿ ಸಿದ್ದೇಶ್ ಬಳಿ ಸಿಕ್ಕ 60 ಲಕ್ಷ ರೂ.ಮೌಲ್ಯಕ್ಕೆ ಸಂಬಂಧಿಸಿದಂತೆ ಬೇನಾಮಿ ಆಸ್ತಿ ಪತ್ತೆಯಾಗಿದೆ. ಈ ಕುರಿತು ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಇದರಲ್ಲಿ ಪ್ರಶಾಂತ್‍ಮಾಡಾಳ್, ಸುರೇಂದ್ರ ಹಾಗೂ ಸಿದ್ದೇಶ್ ಹೆಸರು ಉಲ್ಲೇಖಿಸಲಾಗಿದೆ.
ಇನ್ನೂ, ಟೆಂಡರ್ ಪಡೆಯಲು 90 ಲಕ್ಷ ಹಣ ತಂದಿದ್ದ ಆರೋಪಿಗಳ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್, ಅಲ್ಬರ್ಟ್ ನಿಕೋಲಸ್, ಗಂಗಾಧರ್ ಎಚ್., ದೀಪಕ್ ಜಾಧವ್, ಅರೋಮಸ್ ಕಂಪೆನಿ ಹಾಗೂ ಕೆಎಸ್‍ಡಿಎಲ್ ಅಧಿಕಾರಿ, ಸಿಬ್ಬಂದಿಯ ಹೆಸರುಗಳಿವೆ. ಈ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Next Story





