ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕಾವು ಅಬ್ದುಲ್ ಲತೀಫ್ ಆಯ್ಕೆ

ಮಂಗಳೂರು : ಕೋಲಾರ ಜಿಲ್ಲೆಯ ಪೊಲೀಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ ಕ್ರೀಡಾ ಕೂಟದಲ್ಲಿ ಕಾವು ಅಬ್ದುಲ್ ಲತೀಫ್ ಹಿರಿಯರ ವಿಭಾಗದ 400ಮೀ.ಓಟದಲ್ಲಿ ಬೆಳ್ಳಿಪದಕ, 200ಮೀ. ಓಟದಲ್ಲಿ ಕಂಚಿನ ಪದಕ, ತ್ರಿಬಲ್ ಜಂಪ್‌ನಲ್ಲಿ ಕಂಚಿನ ಪದಕ ಹಾಗೂ 4*100 ರಿಲೆಯಲ್ಲಿ ಚಿನ್ನದ ಪದಕ ಪಡೆದು ಬೆಂಗಳೂರು ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಾಡನ್ನೂರು ಕಾವು ಪೆರ್ನಾಜೆ ಪಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಇವರು ಮಂಗಳೂರು ಬೀದಿ ಬದಿ ವ್ಯಾಪಾರಸ್ಥರ ಸಂಘದ ಸದಸ್ಯರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story