ಬಿಹಾರ: ಮದ್ಯವ್ಯಸನಿಯಿಂದ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
ಹೊಸದಿಲ್ಲಿ/ಬೆಗುಸರಾಯ್: ಹೋಳಿ ಹಬ್ಬದಂದು ಬಿಹಾರದ ಶಾಲೆಯ ಶೌಚಾಲಯದಲ್ಲಿ ಮದ್ಯ ವ್ಯಸನಿಯೊಬ್ಬ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಅತ್ಯಾಚಾರದ ಪ್ರಯತ್ನವನ್ನು ವಿರೋಧಿಸಿದ ಆಕೆಯ ಸ್ನೇಹಿತೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಹುಡುಗಿಯರು ಬೇಗುಸರಾಯ್ ಜಿಲ್ಲೆಯ ತಮ್ಮ ಹಳ್ಳಿಯಲ್ಲಿ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದರು. ಅವರು ಸ್ವಿಂಗ್ ರೈಡ್ ಅನ್ನು ಆನಂದಿಸಲು ಶಾಲೆಯೊಂದಕ್ಕೆ ತೆರಳಿದ್ದರು.
ಆಗ ವ್ಯಕ್ತಿಯೊಬ್ಬ ಶಾಲೆಯ ಶೌಚಾಲಯಕ್ಕೆ 7 ವರ್ಷದ ಬಾಲಕಿಯೊಬ್ಬರನ್ನು ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಆತ ಬಾಲಕಿಯ ಒಂಬತ್ತು ವರ್ಷದ ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ ಹಾಗೂ ಆಕೆ ವಿರೋಧಿಸಿದಾಗ ಆಕೆಯ ಕೆನ್ನೆಯನ್ನು ಕಚ್ಚಿದ್ದ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಂತರ ಆರೋಪಿ ಚೋಟು ಕುಮಾರ್ ಶಾಲೆಯ ಬಳಿಯ ಪೊದೆಗೆ ಎಸೆದಿದ್ದಾನೆ. ಗಾಯಗೊಂಡ ಬಾಲಕಿ ತಪ್ಪಿಸಿಕೊಂಡು ಸ್ಥಳೀಯರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಚೋಟು ಕುಮಾರ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ