ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಗುಜರಾತ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಗಾಂಧಿನಗರ (ಗುಜರಾತ್) : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿಷ್ಠೆಯನ್ನು . 2002 ರ ಗೋಧ್ರಾ ಗಲಭೆಗಳ ಕುರಿತ ಸಾಕ್ಷ್ಯಚಿತ್ರದೊಂದಿಗೆ ಕಳಂಕಗೊಳಿಸಿರುವ ಬಿಬಿಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನು (ಸಂಕಲ್ಪ) ಗುಜರಾತ್ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.
ಸಾಕ್ಷ್ಯಚಿತ್ರವು ಪ್ರಧಾನಿ ಮೋದಿ ವಿರುದ್ಧ ಮಾತ್ರವಲ್ಲ, ದೇಶದ 135 ಕೋಟಿ ನಾಗರಿಕರ ವಿರುದ್ಧವಾಗಿತ್ತು ಎಂದು ಸಚಿವ ಹರ್ಷ ಸಂಘ್ವಿ ಹೇಳಿದ್ದಾರೆ.
"ಪ್ರಧಾನಿ ಮೋದಿ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟರು, ಅಭಿವೃದ್ಧಿಯ ಸಾಧನವನ್ನು ಅಸ್ತ್ರವಾಗಿಸಿಕೊಂಡರು ಹಾಗೂ ದೇಶವಿರೋಧಿ ಶಕ್ತಿಗಳಿಗೆ ತಕ್ಕ ಉತ್ತರವನ್ನು ನೀಡಿದರು. ಅವರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಇರಿಸಲು ಶ್ರಮಿಸಿದರು" ಎಂದು ಅವರು ಹೇಳಿದರು. .
2002 ರ ಗುಜರಾತ್ ಗಲಭೆಗಳನ್ನು ಒಳಗೊಂಡಿರುವ 'India: The Modi Question" ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿತ್ತು
Next Story





