ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ

ಹೊಸದಿಲ್ಲಿ: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಂತರ ರಾಜೀನಾಮೆ ನೀಡಿದ್ದಾರೆ. ಜೋಶಿ ಅವರು ಜೂನ್ ವರೆಗೆ ಸಂಸ್ಥೆಯಲ್ಲಿ ಇರುತ್ತಾರೆ.
ಜೋಶಿಯವರ ನಿರ್ಗಮನವು ಇನ್ಫೋಸಿಸ್ ನಿರ್ವಹಣಾ ತಂಡದಲ್ಲಿ ದೊಡ್ಡ ನಿರ್ವಾತವನ್ನು ಉಂಟುಮಾಡಲಿದೆ. ಕಂಪನಿಯ ಅಧ್ಯಕ್ಷರಾಗಿ ಅವರು ಇನ್ಫೋಸಿಸ್‌ನಲ್ಲಿ ಹಣಕಾಸು ಸೇವೆಗಳು ಹಾಗೂ ಆರೋಗ್ಯ/ಜೀವ ವಿಜ್ಞಾನ ವ್ಯವಹಾರಗಳ ಹೊಣೆಹೊತ್ತಿದ್ದರು.
ಜೋಶಿಯನ್ನು ಉಳಿಸಿಕೊಳ್ಳಲು ಇನ್ಫೋಸಿಸ್ ಕೊನೆಯ ಪ್ರಯತ್ನವನ್ನು ಮಾಡಿದೆ. ಆದರೆ ಅವರು ಸಂಸ್ಥೆಯಲ್ಲಿ ದೊಡ್ಡ ಪಾತ್ರವನ್ನು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





