ಗೌತಮ್ ಗಂಭೀರ್ ಬಗ್ಗೆ ಶಾಹಿದ್ ಅಫ್ರಿದಿ ತೋರಿದ ಕಾಳಜಿಗೆ ನೆಟ್ಟಿಗರ ಮೆಚ್ಚುಗೆ

ಹೊಸದಿಲ್ಲಿ: ತಮ್ಮ ಸಕ್ರಿಯ ಕ್ರಿಕೆಟ್ ಜೀವನದಲ್ಲಿ ತಮ್ಮ ನಡುವಿನ ವೈಮನಸ್ಸಿನಿಂದಲೇ ಸುದ್ದಿಯಾಗಿದ್ದ ಹಿರಿಯ ಕ್ರಿಕೆಟಿಗರಾದ ಗೌತಮ್ ಗಂಭೀರ್ (Gautam Gambhir) ಮತ್ತು ಶಾಹಿದ್ ಅಫ್ರಿದಿ (Shahid Afridi), ಖತರ್‌ನಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟಿ-20 ಪಂದ್ಯದ ವೇಳೆ ಅಫ್ರಿದಿ ಅವರು ಗಂಭೀರ್ ಬಗ್ಗೆ ತೋರಿದ ಕಾಳಜಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ನಡುವಿನ ಪಂದ್ಯದ ವೇಳೇ ಶುಕ್ರವಾರ 12 ನೇ ಓವರ್ ನಡೆಯುತ್ತಿರುವ ವೇಳೆ ಸ್ಟ್ರೈಕ್‌ನಲ್ಲಿದ್ದ ಗಂಭೀರ್ ಅವರು ಅಬ್ದುಲ್ ರಝಾಕ್ ಅವರ ಬೌಲಿಂಗ್ ವೇಳೆ ಚೆಂಡನ್ನು ಫೈನ್ ಲೆಗ್ ಬೌಂಡರಿಯತ್ತ ಬಾರಿಸಬೇಕೆಂದಿದ್ದರೂ ಅದು ತಪ್ಪಿ ಅವರ ಬ್ಯಾಟಿನ ಅಂಚಿಗೆ ತಾಗಿ ಹೆಲ್ಮೆಟ್‌ಗೆ ತಾಗಿತ್ತು. ಇದರಿಂದ ಗೌತಮ್ ಗಂಭೀರ್ ಅವರಿಗೆ ಅಪಾಯವೇನೂ ಆಗಿಲ್ಲ. ಆದರೂ ಅಫ್ರಿದಿ ತಕ್ಷಣ ಗಂಭೀರ್ ಬಳಿಗೆ ಬಂದು ಏನಾಗಿಲ್ಲ ತಾನೇ ಎಂದು ವಿಚಾರಿಸಿದರಲ್ಲದೆ ಸಮಸ್ಯೆಯೇನೂ ಇಲ್ಲ ಎಂದು ತಿಳಿದ ನಂತರ ಬೌಲರ್‌ಗೆ ಬೌಲಿಂಗ್ ಮುಂದುವರಿಸಲು ಸೂಚಿಸಿದರು ಎಂದು ndtv ವರದಿ ಮಾಡಿದೆ.
ಈ ವಿದ್ಯಮಾನದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಅಫ್ರಿದಿ ಅವರು ತೋರಿಸಿದ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪಂದ್ಯಕ್ಕಿಂತ ಮೊದಲು ಗೌತಮ್ ಗಂಭೀರ್-ಶಾಹಿದ್ ಅಫ್ರಿದಿ ಕೈಕುಲುಕುವ ಚಿತ್ರ ವೈರಲ್
'Big-hearted' Shahid Afridi inquires if Gautam Gambhir is ok after that blow #Cricket pic.twitter.com/EqEodDs52f
— Cricket Pakistan (@cricketpakcompk) March 10, 2023