ದ್ವಿತೀಯ ಪಿಯುಸಿ ಪರೀಕ್ಷೆ; ಉಡುಪಿ ಜಿಲ್ಲೆಯಲ್ಲಿ ಒಟ್ಟು 25 ಮಂದಿ ಗೈರು

ಉಡುಪಿ, ಮಾ.9: ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಎರಡು ವಿಷಯಗಳಲ್ಲಿ ಇಂದು ಒಟ್ಟು 25 ಮಂದಿ ಗೈರುಹಾಜರಾಗಿದ್ದಾರೆ.
ಶನಿವಾರ ನಡೆದ ಗಣಿತ ಪರೀಕ್ಷೆಗೆ ಒಟ್ಟು 6228 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 6206 ಮಂದಿ ಹಾಜರಾಗಿ 22 ಮಂದಿ ಗೈರುಹಾಜರಾಗಿದ್ದಾರೆ. ಅದೇ ರೀತಿ ಶಿಕ್ಷಣ ಪರೀಕ್ಷೆಗೆ 22 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು ಇವರಲ್ಲಿ 19 ಮಂದಿ ಹಾಜರಾಗಿ ಮೂವರು ಗೈರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ.
Next Story





