ದೇಶದ ಭದ್ರತೆಗೆ ಸೌಹಾರ್ದ ಅಗತ್ಯ: ಜಿಫ್ರಿ ಮುತ್ತುಕೋಯ ತಂಙಳ್
ಸಮಸ್ತ ಆದರ್ಶ ಮಹಾ ಸಮ್ಮೇಳನ

ಬಂಟ್ವಾಳ: ಕ್ಷುಲ್ಲಕ ವಿಷಯಗಳಿಗೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಹಲವು ಪಂಗಡಗಳಾಗಿ ಸಮಾಜ ವನ್ನು ವಿಂಗಡಿಸುವುದನ್ನು ಬಿಟ್ಟು ಪ್ರವಾದಿಯ ನೈಜ ಸಂದೇಶವನ್ನು ಅರಿತು ಎಲ್ಲರೂ ಒಗ್ಗಟ್ಟಾಗುವ ಅನಿವಾ ರ್ಯತೆ ಇದೆ. ಸರ್ವ ಧರ್ಮೀಯರೊಂದಿಗಿರುವ ಸೌಹಾರ್ದತೆಯು ದೇಶದ ಭದ್ರತೆಗೆ ಅತ್ಯಗತ್ಯವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷ ಶೈಖುನಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯು ಬಿ.ಸಿ. ರೋಡಿನ ಕೈಕಂಬ ಶಂಸುಲ್ ಉಲಮಾ ನಗರದ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ಶುಕ್ರವಾರ ನಡೆದ ಸಮಸ್ತ ಆದರ್ಶ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೇಳನದ ಸ್ವಾಗತ ಸಮಿತಿಯ ನಿರ್ದೇಶಕ ಸಯ್ಯಿದ್ ಹುಸೈನ್ ಬಾಅಲವೀ ತಂಳ್ ಕುಕ್ಕಾಜೆಯ ನೇತೃತ್ವದಲ್ಲಿ ಮಿತ್ತಬೈಲು ಉಸ್ತಾದರ ಖಬರ್ ಝಿಯಾರತ್ ಮತ್ತು ಪ್ರಾರ್ಥನೆನೊಂದಿಗೆ ಆರಂಭವಾದ ಸಮ್ಮೇಳನದ ಅಧ್ಯಕ್ಷತೆ ಯನ್ನು ಕೆ.ಪಿ ಇರ್ಷಾದ್ ದಾರಿಮಿ ಅಲ್ ಜಝ್‌ರಿ ವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಧ್ವಜಾರೋಹಣಗೈದರು. ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಿ.ಕೆ ಅಬ್ದುಲ್ ಖಾದಿರ್ ಅಲ್‌ಖಾಸಿಮಿ ಬಂಬ್ರಾಣ, ಖಾಝಿ ಅಬ್ದುಲ್ಲಾ ಫೈಝಿ ಕೊಡಗು, ಉಸ್ಮಾನುಲ್ ಫೈಝಿ ತೋಡಾರು, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ನೇತಾರರಾದ ಸತ್ತಾರ್ ಪಂದಲ್ಲೂರು ಮುಖ್ಯ ಭಾಷಣ ಮಾಡಿದರು. ಭಾಷಣಗಾರ ಮುಸ್ತಫಾ ಅಶ್ರಫಿ ಕಕ್ಕುಪಡಿ ಕ್ಲಿಪ್ಪಿಂಗ್ ಸಹಿತ ಸಮಸ್ತ ಆದರ್ಶದ ಬಗ್ಗೆ ವಿಷಯ ಮಂಡಿಸಿದರು.
ಸಮಸ್ತ ಕರ್ನಾಟಕ ಮುಶಾವರದ ಕಾರ್ಯಾಧ್ಯಕ್ಷ ಕೆ.ಎಂ. ಇಬ್ರಾಹಿಂ ಬಾಖವಿ ಕೆ.ಸಿ. ರೋಡು, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಅನೀಸ್ ಕೌಸರಿ ಕುಂಬ್ರ, ಇಸ್ತಿಖಾಮ ರಾಜ್ಯ ಸಮಿತಿಯ ಉಸ್ತುವಾರಿ ಖಾಸಿಂ ದಾರಿಮಿ ಸವಣೂರು, ಉಪಾಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಅಬ್ಬಾಸ್ ದಾರಿಮಿ ಕೆಲಿಂಜ, ಇಸ್‌ಹಾಖ್ ಫೈಝಿ ದೇರಳಕಟ್ಟೆ ಭಾಷಣ ಮಾಡಿದರು.
ಸಯ್ಯಿದ್ ಅಕ್ರಂ ಅಲಿ ತಂಙಳ್, ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್, ಸಮಸ್ತ ಕರ್ನಾಟಕ ಮುಶಾವರದ ಸಂಘಟನಾ ಕಾರ್ಯದರ್ಶಿ ಕೆ.ಪಿ.ಎಂ ಶರೀಫ್ ಫೈಝಿ ಕಡಬ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ, ಸಮಸ್ತ ನೇತಾರರಾದ ಮೂಸಲ್ ಫೈಝಿ ಕಕ್ಕಿಂಜೆ, ಇಸ್ಮಾಯಿಲ್ ಫೈಝಿ ಸೂರಿಂಜೆ, ಮೂಸಾ ದಾರಿಮಿ ಕಕ್ಕಿಂಜೆ, ಉಮರ್ ಫೈಝಿ ಸಾಲ್ಮರ, ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ, ಅಶ್ರಫ್ ಫೈಝಿ ಮಿತ್ತಬೈಲು, ಖಲೀಲುರ‌್ರಹ್ಮಾನ್ ದಾರಿಮಿ ಮಾರಿಪಳ್ಳ, ಎಸ್.ಬಿ ದಾರಿಮಿ, ನೌಶಾದ್ ಫೈಝಿ ಕಣ್ಣೂರು, ಇಸ್ತಿಖಾಮ ರಾಜ್ಯ ಸಮಿತಿಯ ಅಬ್ದುಲ್ ಸಲಾಂ ಫೈಝಿ ಎಡಪ್ಪಲಂ, ಶಾಫಿ ಫೈಝಿ ಅಲ್‌ಮಅಬರಿ, ಅಶ್ರಫ್ ಬಾಖವಿ ಚಾಪಳ್ಳ, ಜಂಇಯ್ಯತುಲ್ ಖುತಬಾ ಜಿಲ್ಲಾ ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ, ತಾಜುದ್ದೀನ್ ರಹ್ಮಾನಿ ಮಳಲಿ, ತಬೂಕ್ ಅಬ್ದುರ‌್ರಹ್ಮಾನ್ ದಾರಿಮಿ, ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿಯ ಸದಸ್ಯರಾದ ಹಾಜಿ ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್ ಇಸ್ಮಾಯಿಲ್ ಕಲ್ಲಡ್ಕ, ರಶೀದ್ ಹಾಜಿ ಪರ್ಲಡ್ಕ, ಮದ್ರಸ ಮಾನೇಜ್ಮೆಂಟ್ ಜಿಲ್ಲಾಧ್ಯಕ್ಷ ಎಂ.ಹೆಚ್ ಮುಹಿಯ್ಯುದ್ದೀನ್ ಹಾಜಿ ಅಡ್ಡೂರು, ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಸ್ವಾಗತ ಸಮಿತಿಯ ಕನ್ವೀನರ್ ಖಲಂದರ್ ಶಾಫಿ ನಂದಾವರ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಅಹ್ಮದ್ ಹುಸೈನ್ ಹಾಜಿ ಗಂಟಾಲಕಟ್ಟೆ, ಮುಹಮ್ಮದ್ ಹಾಜಿ ಸಾಗರ್, ಅಬ್ದುಲ್ ಖಾದರ್ ಹಾಜಿ ಸೀಗಲ್ ಕಡಬ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಇಸ್‌ಹಾಕ್ ಹಾಜಿ ತೋಡಾರು, ಶರೀಫ್ ಮೂಸಾ ಕುದ್ದುಪದವು, ಹಮೀದ್ ಕಣ್ಣೂರು, ಫಕೀರಬ್ಬ ಮಾಸ್ಟರ್ ಮರೋಡಿ, ಅಬೂಸ್ವಾಲಿಹ್ ಫೈಝಿ, ಹಾರಿಸ್ ಕೌಸರಿ, ಹನೀಫ್ ಮುಸ್ಲಿಯಾರ್ ಪರ್ಲಿಯಾ, ಕೆ.ವಿ ಮಜೀದ್ ದಾರಿಮಿ, ಹನೀಫ್ ದಾರಿಮಿ ಸವಣೂರು, ವಿಖಾಯ ರಾಜ್ಯ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಅಶ್ರಫ್ ಶೇಡಿಗುಂಡಿ, ಮುಸ್ತಫಾ ಕಟ್ಟದಪಡ್ಪು, ಶಮೀರ್ ಹೆಚ್‌ಕಲ್ಲು, ಮನ್ಸೂರ್ ಮುಸ್ಲಿಯಾರ್, ಶಾಕಿರ್ ಹಾಜಿ ಮಿತ್ತಬೈಲು, ಆಸಿಫ್ ಕಬಕ, ಫಾರೂಕ್ ಮೂಡುಬಿದಿರೆ, ಎಲ್.ಟಿ. ಅಬ್ದುರ‌್ರಝಾಕ್ ಹಾಜಿ ಪುತ್ತೂರು ಉಪಸ್ಥಿತರಿದ್ದರು.
ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯ ಸಂಚಾಲಕ ರಫೀಕ್ ಬಾಖವಿ ಮಟ ಸ್ವಾಗತಿಸಿದರು. ಸಹ ಸಂಚಾಲಕ ಮುಸ್ತಫಾ ಅನ್ಸಾರಿ ಕಣ್ಣೂರು ವಂದಿಸಿದರು. ಇರ್ಫಾನ್ ಮುಸ್ಲಿಯಾರ್ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.
