ಮಂಗಳೂರು: ಎಆರ್‌ಎಂ ಮೋಟಾರ್ಸ್‌ನಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ನಗರದ ಪ್ರತಿಷ್ಠಿತ ಕಿಯಾ ಕಾರಿನ ಅಧಿಕೃತ ಡೀಲರ್ ಎ.ಎರ್.ಎಂ ಮೋಟಾರ್ಸ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸಲಾಯಿತು. ಎಆರ್‌ಎಂ ಮೋಟಾರ್ಸ್‌ನ ನಿರ್ದೇಶಕಿ ಆರೂರು ಕಲ್ಪನಾ ರಾವ್ ಮತ್ತು ಆರೂರು ಆಶಾ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್. ನಾಯಕ್ ಮತ್ತು ಮಂಗಳೂರು ಕಾರ್ಮಿಕ ಇಲಾಖೆಯ ಅಧಿಕಾರಿ ಕಾವೇರಿ ಟಿ. ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.
ಎಆರ್‌ಎಂ ಮೋಟಾರ್ಸ್‌ನ ಮಹಿಳಾ ಗ್ರಾಹಕರು ಭಾಗವಹಿಸಿದ್ದರು. ಸಂಸ್ಥೆಯ ಮಹಿಳಾ ಉದ್ಯೋಗಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಚರಣೆಗೆ ಹೊಸ ಕಳೆ ತಂದಿತ್ತು. ಈ ಸಂದರ್ಭ ಸಂಸ್ಥೆಯ ಜನರಲ್ ಮ್ಯಾನೇಜರ್ ಶಶಿಕುಮಾರ್, ಎಚ್.ಆರ್. ಮ್ಯಾನೇಜರ್ ಮುಹಮ್ಮದ್ ರಿಯಾಝ್, ಸರ್ವಿಸ್ ಮ್ಯಾನೇಜರ್ ವಿಜೀತ್ ಕುಮಾರ್, ಸೇಲ್ಸ್ ಮ್ಯಾನೇಜರ್ ಹರೀಶ್ ರಾವ್ ಉಪಸ್ಥಿತರಿದ್ದರು.
ಆಯಿಶಾ ಸ್ವಾಗತಿಸಿದರು. ದೀಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ನೋಯೆಲ್ಲಾ ರೋಡ್ರಿಗಸ್ ವಂದಿಸಿದರು.