'ಸಿಲಿಂಡರ್ ಬೆಲೆ ಕಡಿಮೆ ಮಾಡ್ರಿ...': ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ನಳಿನ್ ಕುಮಾರ್ ಕಟೀಲ್ಗೆ ಮಹಿಳೆಯಿಂದ ತರಾಟೆ

ಹಾವೇರಿ: ಗ್ಯಾಸ್,ಸಿಲಿಂಡರ್ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಮಾವೇಶಕ್ಕೆ ಬಂದಿದ್ದ ಮಹಿಳೆಯೊಬ್ಬರು ತರಾಟೆ ತೆಗೆದುಕೊಂಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ಎಸ್ಟಿ ಸಮಾವೇಶದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ವೇದಿಕೆ ಬಳಿ ತೆರಳಿದ ಮಹಿಳೆ ''ಸಿಲಿಂಡರ್ ದರ 1,300 ರೂ. ಮಾಡಿದ್ದೀರಿ, ಬಡವರು ಎಲ್ಲಿಗೆ ಹೋಗಬೇಕು?. ಒಂದೇ ಬಾರಿಗೆ 1500 ರೂ. ಮಾಡಿಬಿಡಿ ಸರಿಯಾಗುತ್ತೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ನಿಮಗೆ ದುಡ್ಡಿದೆ ನಿಮ್ಮನೆ ಹೆಣ್ಣುಮಕ್ಕಳು ಅಡುಗೆ ಮಾಡಿ ಹಾಕುತ್ತಾರೆ. ನಾವು ಎಲ್ಲಿಂದ ಹಣ ತರೋದು. ಬೊಮ್ಮಾಯಿ ಸಾಹೇಬರಿಗೆ ಕಡಿಮೆ ಮಾಡಕ್ಕೆ ಹೇಳ್ರೀ... ಇಲ್ಲಾಂದ್ರೆ ನಾನು ಡೈರಕ್ಟ್ ಬೊಮ್ಮಾಯಿಯವರಿಗೇ ಹೇಳ್ತೀನಿ...'' ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯನ್ನು ಬಿಜೆಪಿ ಕಾರ್ಯಕರ್ತರು ಸಮಾಧಾನ ಪಡಿಸಿದರೂ ಮತ್ತೆ ಎದ್ದು ನಿಂತು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಪೋಲ ಕಲ್ಪಿತ ಪಾತ್ರಗಳಾದ 'ಉರಿಗೌಡ-ನಂಜೇಗೌಡ' ಹೆಸರಿನ ಕಮಾನು ಕಿತ್ತು ಹಾಕಿ: ಸಿದ್ದರಾಮಯ್ಯ ಕಿಡಿ







