ಟಿಪ್ಪರ್-ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಧಳದಲ್ಲೇ ಮೃತ್ಯು

ಮಡಿಕೇರಿ ಮಾ.11 : ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಧಳದಲ್ಲೇ ಸಾವನ್ನಪ್ಪಿದ ಘಟನೆ ಹುದುಗೂರು- ಹಾರಂಗಿ ಮಾರ್ಗವಾಗಿ ಯಡವನಾಡು- ಸೋಮವಾರಪೇಟೆ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಯಡವನಾಡು ಗ್ರಾಮದ ನಿವಾಸಿ ಪ್ರವೀಣ್ ಅಲಿಯಾಸ್ ದೊರೆಮಣಿ(46) ಎಂದು ಗುರುತಿಸಲಾಗಿದೆ. ಯಡವನಾಡು ಕಡೆಯಿಂದ ಹಾರಂಗಿ ಕಡೆಗೆ ಬರುತ್ತಿದ್ದ ಟಿಪ್ಪರ್ ಹಾಗೂ ಹಾರಂಗಿಯಿಂದ ಯಡವನಾಡು ಕಡೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಢಿಕ್ಕಿಯಾದ ಪರಿಣಾಮ ದೊರೆಮಣಿ ಸ್ಧಳದಲ್ಲೇ ಸಾವಿಗೀಡಾದರು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ 7ನೇ ಹೊಸಕೋಟೆ ನಿವಾಸಿ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





