ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ಭದ್ರತಾ ಸಿಬ್ಬಂದಿ ಮೃತ್ಯು; ಪತ್ರಕರ್ತರಿಗೆ ಗಾಯ

ಕಾಬೂಲ್, ಮಾ.11: ಉತ್ತರ ಅಫ್ಘಾನ್ ನ ಬಾಕ್ ಪ್ರಾಂತದ ಮಝರ್-ಇ-ಶರೀಫ್ ನಗರದಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು ಐವರು ಪತ್ರಕರ್ತರ ಸಹಿತ ಹಲವರು ಗಾಯಗೊಂಡಿರುವುದಾಗಿ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಝರ್-ಇ-ಶರೀಫ್ ನ ಸಾಂಸ್ಕøತಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಫ್ಘಾನ್ ನ ಮಾಧ್ಯಮಗಳನ್ನು ಗೌರವಿಸುವ ಕಾರ್ಯಕ್ರಮದ ಸಂದರ್ಭ ಬಾಂಬ್ ಸ್ಫೋಟಿಸಿದ್ದು ಸಭಾಂಗಣದ ಹೊರಗೆ ಭದ್ರತಾ ಕಾರ್ಯದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬಂದಿ ಮೃತಪಟ್ಟಿದ್ದಾನೆ. ಗಾಯಗೊಂಡವರಲ್ಲಿ 5 ಪತ್ರಕರ್ತರು ಹಾಗೂ ಮೂರು ಮಕ್ಕಳು ಸೇರಿದ್ದಾರೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ತಾಲಿಬಾನ್ನ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ, ಮಕ್ಕಳು ಹಾಡುತ್ತಿದ್ದ ಸಂದರ್ಭ ಬಾಂಬ್ ಸ್ಫೋಟಿಸಿದೆ. ಇದುವರೆಗೆ ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಲ್ಲ ಎಂದು ಸ್ಥಳೀಯ ಪೊಲೀಸ್ ವಕ್ತಾರರನ್ನು ಉಲ್ಲೇಖಿಸಿದ ಮಾಧ್ಯಮಗಳ ವರದಿ ತಿಳಿಸಿದೆ.
Next Story