ರಶ್ಯದಿಂದ ಅತ್ಯಾಧುನಿಕ ಯುದ್ಧವಿಮಾನ ಖರೀದಿ: ಇರಾನ್ ಘೋಷಣೆ

ಟೆಹ್ರಾನ್, ಮಾ.11: ರಶ್ಯದಿಂದ ಅತ್ಯಾಧುನಿಕ ಎಸ್ಯು-35 ಯುದ್ಧವಿಮಾನಗಳನ್ನು ಖರೀದಿಸುವ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ ಎಂದು ಇರಾನ್ ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಐಆರ್‍ಐಬಿ ವರದಿ ಮಾಡಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯನ್ ಸೇನೆಯು ಇರಾನ್ ನಿರ್ಮಿತ ಡ್ರೋನ್ಗಳನ್ನು ಬಳಸುತ್ತಿದೆ. ಈ ಒಪ್ಪಂದವನ್ನು ವಿಸ್ತರಿಸಲಾಗುತ್ತಿದ್ದು ಸುಕೋಯ್-35 ಯುದ್ಧವಿಮಾನಗಳು ತಾಂತ್ರಿಕವಾಗಿ ಇರಾನ್ ಗೆ ಸೂಕ್ತವಾಗಿದೆ. ಆದ್ದರಿಂದ ಅವುಗಳ ಖರೀದಿ ಕುರಿತ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ಉಕ್ರೇನ್ ವಿರುದ್ಧದ ಆಕ್ರಮಣದ ಬಳಿಕ ರಶ್ಯದ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ಕಳೆದ ಜುಲೈನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೆಹ್ರಾನ್ನಲ್ಲಿ ಇರಾನ್ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
Next Story