ಮಂಡ್ಯ: 'ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ' ತೆರವು

ಮಂಡ್ಯ, ಮಾ.12: ಮಂಡ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಮಿಸಿದ್ದ 'ಉರಿಗೌಡರು ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರ' ತೆರವುಗೊಳಿಸಲಾಗಿದೆ. ತೀವ್ರ ಟೀಕೆಗೆ ಕಾರಣವಾಗಿದ್ದ ಈ ದ್ವಾರವನ್ನು ರಾತ್ರಿ ವೇಳೆ ತೆರವುಗೊಳಿಸಲಾಗಿದ್ದು, ಅದರ ಬದಲು ಆ ಸ್ಥಳದಲ್ಲಿ, 'ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ'ವನ್ನು ನಿಲ್ಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಮಂಡ್ಯಕ್ಕೆ ಆಗಮಿಸುವರು. ಈ ವೇಳೆ ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆ ಮತ್ತು ರೋಡ್ ಶೋ ನಡೆಸಲಿರುವರು. ಅವರುಗೆ ಸ್ವಾಗತ ಕೋರಿ ನಿರ್ಮಿಸಲಾಗಿದ್ದ ಮಹಾದ್ವಾರಗಳ ಪೈಕಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರ'ಕ್ಕೆ ಸಾಮಾಜಿಕ ತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ತಕ್ಷಣ ಫ್ಲೆಕ್ಸ್ ತೆರವುಗೊಳಿಸುವಂತೆ ಹಲವರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾದ್ವಾರದ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; 'ಸಿಲಿಂಡರ್ ಬೆಲೆ ಕಡಿಮೆ ಮಾಡ್ರಿ...': ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ನಳಿನ್ ಕುಮಾರ್ ಕಟೀಲ್ಗೆ ಮಹಿಳೆಯಿಂದ ತರಾಟೆ
