ಹೈದರಾಬಾದ್ ನಲ್ಲಿ ಅಮಿತ್‌ಶಾ ರನ್ನು ಸ್ವಾಗತಿಸಿದ ʼವಾಶಿಂಗ್ ಪೌಡರ್ ನಿರ್ಮಾʼ ಪೋಸ್ಟರ್ ಗಳು !

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಐಎಸ್‌ಎಫ್ ರೈಸಿಂಗ್ ಡೇ ಪರೇಡ್‌ಗಾಗಿ ನಗರಕ್ಕೆ ಆಗಮಿಸುತ್ತಿದ್ದಂತೆ, ನಗರದಲ್ಲಿ 'ವಾಶಿಂಗ್ ಪೌಡರ್ ನಿರ್ಮಾ' ಪೋಸ್ಟರ್‌ಗಳು ಅವರನ್ನು ಅಣಕಿಸುತ್ತಿವೆ ಎಂದು siasat.com ವರದಿ ಮಾಡಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಿಲುಕಿದ ಬಳಿಕ ಈಗ ಬಿಜೆಪಿ ಪಕ್ಷ ಸೇರ್ಪಡೆಗೊಂಡು ನಾಯಕರಾಗಿರುವ ಹಿಮಂತ ಬಿಸ್ವ ಶರ್ಮಾ, ನಾರಾಯಣ ರಾಣೆ, ಸುವೆಂದು ಅಧಿಕಾರಿ, ಸುಜನಾ ಚೌಧರಿ, ವಿರೂಪಾಕ್ಷಪ್ಪ, ಈಶ್ವರಪ್ಪ, ಜ್ಯೋತಿರಾದಿತ್ಯ ಸಿಂಧಿಯಾ, ಅರ್ಜುನ್ ಖೋಟಾರ್ ಅವರ ಮುಖಗಳು ನಿರ್ಮಾ ಜಾಹೀರಾತಿನಲ್ಲಿ ಬರುವ ಹುಡುಗಿಯ ಮುಖದ ಮೇಲೆ ರಾರಾಜಿಸುತ್ತಿದ್ದವು. ಬಿಜೆಪಿ. ಪೋಸ್ಟರ್ ಜೊತೆಗೆ ದೊಡ್ಡದಾದ 'ವೆಲ್ಕಮ್ ಟು ಅಮಿತ್ ಶಾ' ಎಂಬ ಬರಹವೂ ಇದೆ.
ದಿಲ್ಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರ ಇಡಿ ತನಿಖೆಯ ದಿನದಂದು ನಗರದಲ್ಲಿ ಕಂಡು ಬಂದ ಕೆಲ ಪೋಸ್ಟರ್ ಗಳ ಬಳಿಕ ‘ರೇಡ್’ ಡಿಟರ್ಜೆಂಟ್ ಪೋಸ್ಟರ್‌ಗಳು ಕಂಡು ಬಂದಿವೆ. ಬಿಆರ್‌ಎಸ್ ಹೈದರಾಬಾದ್‌ನಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದು, ಅವುಗಳಲ್ಲಿ ಒಂದು ಹಿಂದೂ ಪುರಾಣದ ಹತ್ತು ತಲೆಯ ರಾವಣನಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಚಿತ್ರಿಸಲಾಗಿದೆ.
ಪೋಸ್ಟರ್‌ನಲ್ಲಿ ಪ್ರಧಾನಿಯನ್ನು 'ಪ್ರಜಾಪ್ರಭುತ್ವದ ವಿಧ್ವಂಸಕ ಮತ್ತು 'ಬೂಟಾಟಿಕೆಯ ಅಜ್ಜ' ಎಂದು ಬಣ್ಣಿಸಲಾಗಿದೆ.







