ಎಸೆಸ್ಸೆಫ್ ಸುರತ್ಕಲ್ ಡಿವಿಷನ್‌ನ ವಾರ್ಷಿಕ ಮಹಾಸಭೆ

ಮಂಗಳೂರು, ಮಾ.12: ಎಸೆಸ್ಸೆಫ್ ಸುರತ್ಕಲ್ ಡಿವಿಷನ್‌ನ ವಾರ್ಷಿಕ ಮಹಾಸಭೆಯು ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾಪುರದ ಎಸ್ಸೆಸ್ಸೆಫ್ ಈದ್ಗಾ ಶಾಖಾ ಕಚೇರಿಯಲ್ಲಿ ನಡೆಯಿತು.
ಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಸಭೆಯನ್ನು ಉದ್ಘಾಟಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸೀಫ್ ವಾರ್ಷಿಕ ವರದಿ ವಾಚಿಸಿದರು. ಫಿನಾನ್ಸ್ ಕಾರ್ಯದರ್ಶಿ ತೌಸೀಫ್ ಸುರತ್ಕಲ್ ಲೆಕ್ಕಪತ್ರ ಮಂಡಿಸಿದರು.
ವೀಕ್ಷಕರಾಗಿ ದ.ಕ. ವೆಸ್ಟ್ ಜಿಲ್ಲಾ ನಾಯಕರಾದ ಇಬ್ರಾಹಿಂ ಅಹ್ಸನಿ, ಸಿದ್ದೀಕ್ ಬಜ್ಪೆ, ನೌಸೀಫ್ ಕಾವೂರು ಭಾಗವಹಿಸಿದ್ದರು. 2023-24ನೆ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ರವೂಫ್ ಹಿಮಮಿ ಹಳೆಯಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಫ್ರೀದ್ ಕೃಷ್ಣಾಪುರ, ಫಿನಾನ್ಸ್ ಸೆಕ್ರೆಟರಿಯಾಗಿ ತನ್ಸೀರ್ 4ನೇ ಬ್ಲಾಕ್, ಕಾರ್ಯದರ್ಶಿಗಳಾಗಿ ರಾಹಿಲ್ ಪಕ್ಷಿಕೆರೆ, ಶಫೀಕ್ ಪಕ್ಷಿಕೆರೆ, ರಶೀದ್ ಸಅದಿ ಅಂಗರಗುಂಡಿ, ತೌಸೀಫ್ ಸುರತ್ಕಲ್, ಆಸೀಫ್ ಪಕ್ಷಿಕೆರೆ, ಸಫ್ವಾನ್ ಜಂಕ್ಷನ್, ನಯೀಮ್ ಸುರತ್ಕಲ್, ಹನೀಫ್ ಸುರತ್ಕಲ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಫೀಕ್ ಮರ್ವಾ ಕೃಷ್ಣಾಪುರ, ನೌಫಲ್ ಶಾ ಈದ್ಗಾ, ತ್ವಾಹಿರ್ ಜನತಾಕಾಲನಿ, ಅನ್ಸಾರ್ 9ನೇ ಬ್ಲಾಕ್, ಸವಾಝ್ ಕಾಟಿಪಳ್ಳ, ಇರ್ಶಾದ್ 3ನೇ ಬ್ಲಾಕ್, ಅನೀಸ್ ಗುತ್ತಕಾಡ್, ಸಿರಾಜ್ ಕಾಪಿಕಾಡ್, ಹೈದರ್ ಶೇಡಿಗುರಿ, ನೆಬೀಲ್ ಮುಕ್ಕ ಅವರನ್ನು ಆಯ್ಕೆ ಮಾಡಲಾಯಿತು.