ಪುತ್ತೂರು ಸಂತ ಫಿಲೋಮಿನಾ ಕಾಲೇಜ್‍ಗೆ 20 ರ‍್ಯಾಂಕ್‌ಗಳು: ಬಿಸಿಎಯಲ್ಲಿ ಫಾತಿಮತ್ ಸಾನಿದಗೆ ಪ್ರಥಮ ರ‍್ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಪರವಿ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್‍ಗೆ ಪದವಿ ವಿಭಾಗದಲ್ಲಿ 7 ಹಾಗೂ ಸ್ನಾನಕ್ಕೋತ್ತರ ವಿಭಾಗದಲ್ಲಿ 13 ರ‍್ಯಾಂಕ್ ಗಳು ಲಭಿಸಿವೆ.
ಬಿಸಿಎ ಪದವಿ ವಿಭಾಗದ ಫಾತಿಮತ್ ಸಾನಿದ ಅವರು 97.4% ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಅವರು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಅಬ್ದುಲ್ ಖಾದರ್ ಪಿ.ಎ ಮತ್ತು ಹಾಜಿರಾ ದಂಪತಿಯ ಪುತ್ರಿ.
ಬಿಎಸ್ಸಿ ವಿಭಾಗದಲ್ಲಿ ಧೀರಜ್ ಎಂ ಅವರು ಶೇ. 97.94% ಅಂಕಗಳೊಂದಿಗೆ ಮೂರನೇ ರ‍್ಯಾಂಕ್ ಗಳಿಸಿರುತ್ತಾರೆ. ಅವರು ನಗರದ ದರ್ಬೆ ನಿವಾಸಿ ಮೋಹನ್ ಆಚಾರ್ಯ ಹಾಗೂ ಶಾರದಾ ದಂಪತಿಯ ಪುತ್ರ.
ಬಿಎಸ್ಸಿ ವಿಭಾಗದ ಶ್ರೀಶ ಎಂ ಎಸ್ ಅವರು 97.82% ಅಂಕಗಳನ್ನು ಪಡೆದು 5ನೇ ರ‍್ಯಾಂಕ್ ಗಳಿಸಿರುತ್ತಾರೆ. ಅವರು ಬಂಟ್ವಾಳ ತಾಲೂಕಿನ ಅಳಿಕೆ ನಿವಾಸಿ ಸಂಕಪ್ಪಗೌಡ ಹಾಗೂ ಶಾರದಾ ದಂಪತಿಯ ಪುತ್ರ.
ಬಿಬಿಎ ವಿಭಾಗದ ಹರ್ಷಿತ ಕೆ ಅವರು 91.14% ಅಂಕಗಳೊಂದಿಗೆ 5ನೇ ರ‍್ಯಾಂಕ್ ಪಡೆದಿರುತ್ತಾರೆ ಅವರು ಸುಳ್ಯ ತಾಲೂಕಿನ ಬಾಳಿಲ ನಿವಾಸಿ ಕೇಳುಮಣಿಯಾಣ ಹಾಗೂ ವಾರಿಜ ದಂಪತಿಯ ಪುತ್ರಿ.
ಬಿಕಾಂ ವಿಭಾಗದಲ್ಲಿ ಶ್ರೀದೇವಿ ಕೆ ಅವರು 94.71% ಅಂಕಗಳನ್ನು ಪಡೆದು 6ನೇ ರ‍್ಯಾಂಕ್ ಗಳಿಸಿರುತ್ತಾರೆ. ಅವರು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ಮಹಾಬಲ ಭಟ್ ಕೆ ಹಾಗೂ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೇಮಲತಾ ಕೆ ದಂಪತಿಯ ಪುತ್ರಿ.
ಬಿಕಾಂ ವಿಭಾಗದಲ್ಲಿ ಪ್ರತಿಮಾ ಎ ರವರು 94.57% ಅಂಕಗಳಿಸುವುದರ ಮೂಲಕ 7ನೇ ರ‍್ಯಾಂಕ್, ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ದೀಪ್ತಿ ಅವರು ರ‍್ಯಾಂಕ್ ಪಡೆದುಕೊಂಡಿದ್ದಾರೆ.