ಆತ್ರಾಡಿ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಧ್ಯಕ್ಷರಾಗಿ ಇರ್ಫಾನ್ ಆಯ್ಕೆ

ಉಡುಪಿ, ಮಾ.12: ಆತ್ರಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2023-24ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಇರ್ಫಾನ್, ಉಪಾಧ್ಯಕ್ಷರಾಗಿ ಅಬ್ದುಲ್ ತವ್ವಾಬ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಸಿದ್ದೀಕ್, ಕಾರ್ಯ ದರ್ಶಿಯಾಗಿ ಶಂಸುದ್ದೀನ್, ಜತೆ ಕಾರ್ಯದರ್ಶಿಯಾಗಿ ಮುಹಮ್ಮದ್ ವಾಸಿಲ್ ಮತ್ತು ಇತರ ಸದಸ್ಯರಾಗಿ ಇಮ್ರಾನ್ ಕಬ್ಯಾಡಿ, ಸಲೀಂ ಶಾಲಿಮಾರ್, ಅಶ್ರಫ್ ಕಬ್ಯಾಡಿ, ಮುಹಮ್ಮದ್ ಇಸ್ಮಾಯಿಲ್, ರಶೀದ್, ಮುಹಮ್ಮದ್ ಶಾಹಿಲ್ ಅವರನ್ನು ಆಯ್ಕೆ ಮಾಡಲಾಯಿತು.
Next Story