ಮುಲ್ಕಿ: ಮಹಿಳೆಯ ಅತ್ಯಾಚಾರ ಪ್ರಕರಣ; ಆರೋಪಿ ಸೆರೆ

ಮುಲ್ಕಿ: ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಗೆ ಸಮೀಪದ ಕೆಂಚನಕೆರೆ ನಿವಾಸಿ ಆನಂದ ಶೆಟ್ಟಿಗಾರ್ (58) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತೋಕೂರು ನಿವಾಸಿ ನೇತ್ರಾವತಿ ಎಂಬವರು ಸುಮಾರು 5 ವರ್ಷಗಳ ಹಿಂದೆ ಆನಂದ ಶೆಟ್ಟಿಗಾರ್ ನಿಂದ ಸಾಲ ಪಡೆದುಕೊಂಡಿದ್ದು ಅದನ್ನು ಕ್ಲಪ್ತ ಸಮಯದಲ್ಲಿ ತೀರಿಸಲು ಆಗದ ಸಂದರ್ಭ ಆರೋಪಿ ಆನಂದ ನೇತ್ರಾವತಿ ಅವರನ್ನು ಬೆದರಿಸಿ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಲಾಗಿದೆ.
ಅಲ್ಲದೆ ಮಾ.10 ರಂದು ಸಂಜೆ ಸುಮಾರು 3 ಗಂಟೆಗೆ ನೇತ್ರಾವತಿ ಅವರು ಕೆಲಸ ಮಾಡುತ್ತಿದ್ದ ಕಾರ್ನಾಡುನಲ್ಲಿರುವ ಅಂಗಡಿಗೆ ಬಂದು ಅನುಚಿತವಾಗಿ ವರ್ತಿಸಿ, ಅಂಗಡಿಯ ಮಾಲಕನಿಗೆ ಹೊಡೆದು, ನೇತ್ರಾವತಿ ಅವರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವುದಾಗಿ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story