ದಿಢೀರ್ ಬಂದಿದ್ದ 'ಉರಿಗೌಡ, ದೊಡ್ಡನಂಜೇಗೌಡ' ರಾತ್ರೋರಾತ್ರಿ ಎಲ್ಲಿ ಹೋದರು: ಮೋದಿಗೆ ಕಾಂಗ್ರೆಸ್ ಪ್ರಶ್ನೆ
''ಸಿ.ಟಿ ರವಿಯನ್ನು ವಿಚಾರಿಸಿ...''

ಮಂಡ್ಯ, ಮಾ.12: ಇಂದು ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಗೆ ಸ್ವಾಗತ ಕೋರಿ ನಿರ್ಮಿಸಲಾಗಿದ್ದ ಮಹಾದ್ವಾರಗಳ ಪೈಕಿ 'ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ' ತೀವ್ರ ಟೀಕೆಗೆ ಕಾರಣವಾಗಿದ್ದು, ಶನಿವಾರ ರಾತ್ರಿ ವೇಳೆ ತೆರವುಗೊಳಿಸಲಾಗಿದ್ದು, ಅದರ ಬದಲು ಆ ಸ್ಥಳದಲ್ಲಿ, 'ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ'ವನ್ನು ನಿಲ್ಲಿಸಲಾಗಿದೆ.
ಈ ಕುರಿತಾಗಿ ಟ್ವಿಟರ್ ನಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ''ದಿಢೀರ್ ಬಂದಿದ್ದ ಉರಿಗೌಡ, ದೊಡ್ಡನಂಜೇಗೌಡ ಎಲ್ಲಿ ಹೋದರು'' ಎಂದು ಪ್ರಶ್ನೆ ಮಾಡಿದೆ.
'' ಪ್ರಧಾನಿ ಮೋದಿ ಅವರೇ,(@narendramodi) ನಿಮ್ಮನ್ನು ಸ್ವಾಗತಿಸಲು ದಿಢೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿ.ಟಿ ರವಿ ಅವರನ್ನು ವಿಚಾರಿಸಿ!'' ಎಂದು ಕಾಂಗ್ರೆಸ್ ಕುಟುಕಿದೆ.
''ಬಿಜೆಪಿ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ?'' ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಇದನ್ನೂ ಓದಿ ಟಿಪ್ಪುವಿನ ಸಾಧನೆಗಳನ್ನು ಮರೆಮಾಚಲು ಆರೆಸ್ಸೆಸ್‌ನಿಂದ ಉರಿಗೌಡ, ನಂಜೇಗೌಡ ಎಂಬ ಇಬ್ಬರ ಸೃಷ್ಟಿ: ಸಾಹಿತಿ ಮುಕುಂದರಾಜ್
ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ಬಗ್ಗೆ ಸಾಮಾಜಿಕ ತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ತಕ್ಷಣ ಫ್ಲೆಕ್ಸ್ ತೆರವುಗೊಳಿಸುವಂತೆ ಹಲವರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾದ್ವಾರದ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಡ್ಯ: 'ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ' ತೆರವು
Dear @narendramodi,
— Karnataka Congress (@INCKarnataka) March 12, 2023
ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ @CTRavi_BJP ಅವರನ್ನು ವಿಚಾರಿಸಿ!@BJP4Karnataka ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ?#ModiMosa