ಎಂಸಿಸಿ ಬ್ಯಾಂಕ್‌ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು, ಮಾ.12: ನಮ್ಮ ಸಮಾಜದಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂ.ಭ. ಸಿಸಿಲಿಯಾ ಮೆಂಡೋನ್ಸಾ ಬಿ.ಎಸ್, ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಎಂಸಿಸಿ ಬ್ಯಾಂಕ್‌ನ ಪಿಎಫ್‌ಎಕ್ಸ್ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ, ಆರೋಗ್ಯ, ಆರ್ಥಿಕ, ರಾಜಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ರಕ್ಷಣಾ ಕ್ಷೇತ್ರ ದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದೀಗ ಭಾರತದ ರಾಷ್ಟ್ರಪತಿಯೂ ಮಹಿಳೆ ಆಗಿದ್ದಾರೆ. ಇದಕ್ಕಾಗಿ ಮಹಿಳೆಯರು ಹೆಮ್ಮೆ ಪಡಬೇಕು ಎಂದರು.
ಬ್ಯಾಂಕಿನ ನಿರ್ದೇಶಕರರಾದ ಡಾ ಫ್ರೀಡಾ ಎಫ್. ಡಿಸೋಜ, ಶರ್ಮಿಳಾ ಮಿನೇಜಸ್, ಶಾಖಾ ವ್ಯವಸ್ಥಾಪಕರಾದ ಜೆಸಿಂತಾ ಸೆರಾವೊ, ಬ್ಲಾಂಚೆ ಫೆರ್ನಾಂಡಿಸ್, ಸುನೀತಾ ಡಬ್ಲ್ಯೂ ಡಿಸೋಜ, ಐರಿನ್ ಡಿಸೋಜ, ಜೆಸಿಂತಾ ಫೆರ್ನಾಂಡಿಸ್ ಮತ್ತು ವಿಲ್ಮಾ ಜ್ಯೋತಿ ಸಿಕ್ವೇರಾ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಎಲ್ರಾಯ್ ಕೆ.ಕ್ರಾಸ್ಟೊ, ಸಿ.ಜಿ.ಪಿಂಟೊ, ಜೆ.ಪಿ.ರೋಡ್ರಿಗಸ್, ಅನಿಲ್ ಪತ್ರಾವೋ, ಡಾ ಜೆರಾಲ್ಡ್ ಪಿಂಟೊ, ಮಾರ್ಸೆಲ್ ಎಂ. ಡಿಸೋಜ, ಡೇವಿಡ್ ಡಿಸೋಜ, ಸುಶಾಂತ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್ ಉಪಸ್ಥಿತರಿದ್ದರು.
ನಿರ್ದೇಶಕ ಆಂಡ್ರ್ಯೂ ಡಿಸೋಜ ಬ್ಯಾಂಕ್ ಅಭಿವೃದ್ಧಿಗಾಗಿ ಮಹಿಳೆಯರು ವಹಿಸಿದ ಪ್ರಮುಖ ಪಾತ್ರವನ್ನು ವಿವರಿಸಿದರು. ಬಂದರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತ್ ಗಾಂವ್ಕರ್ ಶುಭ ಹಾರೈಸಿದರು.
ಮಹಿಳಾ ಸಬಲೀಕರಣ ಮತ್ತು ಪ್ರಗತಿ ಕುರಿತು ನಿರ್ದೇಶಕಿ ಐರಿನ್ ರೆಬೆಲ್ಲೊ ,ಕಂಕನಾಡಿ ಶಾಖೆಯ ಶಾಖಾ ವ್ಯವಸ್ಥಾಪಕಿ ಐಡಾ ಪಿಂಟೊ ಮಾತನಾಡಿದರು.
ಬ್ಯಾಂಕಿನ ನಿವೃತ್ತ ಬ್ರಾಂಚ್ ಮ್ಯಾನೇಜರ್, ಕ್ಲಿಫರ್ಡ್ ಡಿ’ಕೋಸ್ಟಾ ಮತ್ತು ಕ್ಲೆರಿಕಲ್ ಸ್ಟಾಫ್ ವಿಲಿಯಂ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಿಸೋಜರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಪತ್ರವನ್ನು ಹಿರಿಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ, ಕಾರ್ಕಳ ಶಾಖೆಯ ಶಾಖಾ ವ್ಯವಸ್ಥಾಪಕ ರಾಯನ್ ಪ್ರವೀಣ್ ವಾಚಿಸಿದರು. ವಂ.ಪಾಲ್ ಸೆಬಾಸ್ಟಿಯನ್ ಅವರಿಂದ ಮ್ಯಾಜಿಕ್ ಶೋ ನಡೆಯಿತು.
ಪ್ರತ್ಯಕ್ಷ್ ಲೂಯಿಸ್ ಪ್ರಾರ್ಥಿಸಿದರು. ಅಧ್ಯಕ್ಷ ಅನಿಲ್ ಲೋಬೋ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಸುನೀಲ್ ಮಿನೇಜಸ್ ವಂದಿಸಿದರು. ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.