ಆಸ್ಕರ್ ಪುರಸ್ಕೃತ ಕಾರ್ತಿಕಿ ಗೊನ್ಸಾಲ್ವಿಸ್ ಮಂಗಳೂರು ನಂಟು !

ಲಾಸ್ ಏಂಜಲೀಸ್ : 'ದಿ ಎಲಿಫೆಂಟ್ ವಿಸ್ಪರರ್ಸ್' ಎಂಬ ಕಿರು ಸಾಕ್ಷ್ಯಚಿತ್ರದ ಮೂಲಕ ಆಸ್ಕರ್ ಪ್ರಶಸ್ತಿಯನ್ನು ಭಾರತಕ್ಕೆ ತಂದು ಹೆಮ್ಮೆಗೆ ಕಾರಣವಾದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರ ಮೂಲ ಕರ್ನಾಟಕದ ಮಂಗಳೂರಿನವರೆಗೂ ಹರಡಿದೆ.
ಹೌಲೌಟ್, ಹೌಡು ಯು ಮೆಷರ್ ಎ ಇಯರ್ ?, ದಿ ಮಾರ್ಥಾ ಮಿಚೆಲ್ ಎಫೆಕ್ಟ್ ಮತ್ತು ಸ್ಟ್ರೇಂಜರ್ ಅಟ್ ದಿ ಗೇಟ್ ಜೊತೆಗೆ ದಿ ಎಲಿಫೆಂಟ್ ವಿಸ್ಪರರ್ಸ್ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಿತ್ತು. ಉತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೆ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಗಿದೆ.
ಕಾರ್ತಿಕಿ ಗೋನ್ಸಾಲ್ವಿಸ್ ಅವರು ಮಂಗಳೂರಿನ ಎಂಸಿಸಿ ಬ್ಯಾಂಕ್‌ನ ಸಂಸ್ಥಾಪಕರಾದ ಪಿಎಫ್‌ಎಕ್ಸ್ ಸಲ್ಡಾನ್ಹಾ ಕುಟುಂಬಕ್ಕೆ ಸೇರಿದವರು. ಸಲ್ದಾನ್ಹರ ಐದನೇ ತಲೆಮಾರಿನವರಾಗಿರುವ ಕಾರ್ತಿಕಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ.
ಕಾರ್ತಿಕಿ ಐಐಟಿ ಮಂಡಿ (ಹಿಮಾಚಲ ಪ್ರದೇಶ) ಮಾಜಿ ಸಂಸ್ಥಾಪಕ ನಿರ್ದೇಶಕ ತಿಮೋತಿ ಗೊನ್ಸಾಲ್ವಿಸ್ ಅವರ ಪುತ್ರಿ. ತಿಮೋತಿ ಗೊನ್ಸಾಲ್ವೆಸ್ ಅವರು ಅಲನ್ ಅವರ ಮಗ. ಅಲನ್ ಗೊನ್ಸಾಲ್ವಿಸ್ ಅವರು ಪಿಎಫ್‌ಎಕ್ಸ್ ಸಲ್ಡಾನ್ಹಾ ಮಗಳು ಮೋನಿಕಾ ಗೊನ್ಸಾಲ್ವಿಸ್ ಅವರ ಮಗ.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಕಾರ್ತಿಕಿ ಗೋನ್ಸಾಲ್ವಿಸ್ ತಮ್ಮ ಚಲನಚಿತ್ರವನ್ನು ಗುರುತಿಸಿದಕ್ಕಾಗಿ ಅಕಾಡೆಮಿಗೆ ಧನ್ಯವಾದ ಸಲ್ಲಿಸಿದರು. ನನ್ನ ಮಾತೃಭೂಮಿ ಭಾರತವನ್ನು ಸ್ಮರಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
(ಕಾರ್ತಿಕಿ ಗೊನ್ಸಾಲ್ವಿಸ್)
ಸ್ಲಮ್‌ಡಾಗ್ ಮಿಲಿಯನೇರ್ ಅನೇಕ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಾಗ, ಚಿತ್ರದ ನಾಯಕಿ ಫ್ರೀಡಾ ಪಿಂಟೋ ಮಂಗಳೂರಿನವರು ಎಂಬುದು ಬೆಳಕಿಗೆ ಬಂದಿತು.
'ದಿ ಎಲಿಫೆಂಟ್ ವಿಸ್ಪರರ್ಸ್ ಗೊನ್ಸಾಲ್ವಿಸ್' ಅವರ ಚೊಚ್ಚಲ ನಿರ್ದೇಶದ ಚಿತ್ರವಾಗಿದೆ. ಈ ಸಾಕ್ಷ್ಯಚಿತ್ರವು ದಂಪತಿ ಮತ್ತು ಅವರ ಆರೈಕೆಗೆ ಒಪ್ಪಿಸಲಾದ ಅನಾಥ ಮರಿ ಆನೆ ರಘು ನಡುವೆ ಬೆಳೆಯುವ ಬಾಂಧವ್ಯದ ಕುರಿತಾಗಿದೆ.
ಇದನ್ನೂ ಓದಿ: ಆಸ್ಕರ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್'ನಲ್ಲಿ ಕಾಣಿಸಿಕೊಂಡ ದಂಪತಿ ಇನ್ನೂ ಸಾಕ್ಷ್ಯಚಿತ್ರ ನೋಡಿಲ್ಲ