ಯೆನೆಪೋಯ ಕಾಲೇಜಿನಲ್ಲಿ ಮೂರು ಹೊಸ ಪದವಿ ಕೋರ್ಸ್‌ಗಳ ಸೇರ್ಪಡೆ

ಮಂಗಳೂರು, ಮಾ.13: ಯೆನೆಪೋಯ ಪರಿಗಣಿತ ವಿವಿಯ ಘಟಕವಾಗಿರುವ ಇಲ್ಲಿನ ಬಲ್ಮಠದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ (ವೈಐಎಎಸ್‌ಸಿಎಂ) ಸಂಸ್ಥೆಯು ಸಾಫ್ಟ್‌ವೇರ್ ಉತ್ಪನ್ನ ಇಂಜಿನಿಯರಿಂಗ್‌ನಲ್ಲಿ ಬಿಸಿಎ ಪದವಿ (ಹೊನರ್ಸ್), ಬಿಎ (ಹೊನರ್ಸ್) ಸಂವಹನ ವಿನ್ಯಾಸ ಮತ್ತು ಫ್ಯಾಶನ್ ವಿನ್ಯಾಸ ಮತ್ತು ಬಿಎ ಪಬ್ಲಿಕ್ ಪಾಲಿಸಿ ಎಂಬೆಡೆಡ್ ವಿಥ್ ಸಿವಿಲ್ ಸರ್ವಿಸಸ್ ಪದವಿ ಕೋರ್ಸ್‌ಗಳನ್ನು ಆರಂಭಿಸಲಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ (ವೈಐಎಎಸ್‌ಸಿಎಂ) ಸಂಸ್ಥೆಯು ಉಪಪ್ರಾಂಶು ಪಾಲರಾದ ಶರೀನ್. ಪಿ ಅವರು ಮೂರು ಕೋರ್ಸ್‌ಗಳ ಬಗ್ಗೆ ವಿವರ ನೀಡಿದರು.
ಸಾಫ್ಟ್‌ವೇರ್ ಉತ್ಪನ್ನ ಇಂಜಿನಿಯರಿಂಗ್‌ನಲ್ಲಿ ಬಿಸಿಎ ಪದವಿಯು ಗಣಕ ಯಂತ್ರ ವಿಜ್ಞಾನದಲ್ಲಿ ದೇಶದ ಅತ್ಯಂತ ಸಂದರ್ಭೋಚಿತ ಪಠ್ಯಕ್ರಮವಾಗಿದೆ. ಭಾರತ ಮತ್ತು ವಿದೇಶಗಳಲ್ಲಿನ ಉನ್ನತ ತಂತ್ರಜ್ಞಾನ ಕಂಪೆನಿಗಳೊಂದಿಗೆ ಕೆಲಸದ ಅನುಭವವನ್ನು ಪಡೆಯಬಹುದು. ಪದವಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಪದವೀಧರರ ಸರಾಸರಿ ವೇತನದ 3 ಪಟ್ಟು ಹೆಚ್ಚು ಗಳಿಸಲು ಅವಕಾಶವನ್ನು ನೀಡುತ್ತದೆ, ಪದವಿಯ ಮೊದಲು ರೂ.8 ಲಕ್ಷದವರೆಗೆ ವಿದ್ಯಾರ್ಥಿ ವೇತನ ಮತ್ತು ಇಂಟರ್ನ್‌ಶಿಪ್ ವೇತನಗಳ ಮೂಲಕ ಅವರ ಬೋಧನಾ ಶುಲ್ಕದ ಶೇ 50ಕ್ಕಿಂತ ಹೆಚ್ಚು ಮರುಪಡೆಯಲು ಅವಕಾಶ ಇರುತ್ತದೆ. ಮಾ.16ರಂದು ವಿವಿಯ ಸಹ ಕುಲಾಧಿಪತಿ ಮಹಮ್ಮದ್ ಫರ್ಹಾದ್ ಯೆನೆಪೋಯ ನೂತನ ಪದವಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ.
ಬಿಎ (ಹೊನರ್ಸ್) ಸಂವಹನ ವಿನ್ಯಾಸ, ಫ್ಯಾಶನ್ ವಿನ್ಯಾಸ:ಐಎಸ್‌ಡಿಸಿ ಮಂಗಳೂರು ವೈಐಎಎಸ್‌ಸಿಎಂ ಪ್ರಸ್ತಾವಿತ ಕೋರ್ಸ್ ಯುನೈಟೆಡ್ ಕಿಂಗ್‌ಡಮ್‌ನ ವಿಶ್ವ ವಿನ್ಯಾಸ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಅನಿಮೇಷನ್, ಗ್ರಾಫಿಕ್ ಮತ್ತು ವಿಷುಯಲ್ ಎಫೆಕ್ಟ್ಸ್ ಮತ್ತು ಬಿಎ ಫ್ಯಾಶನ್ ವಿನ್ಯಾಸದಲ್ಲಿ ವಿಶೇಷತೆ ಹೊಂದಿರುವ ಬಿಎ ಪದವಿಯ ವಿನ್ಯಾಸವನ್ನು ಸೃಜನಶೀಲ ಕಲೆಗಳು, ವಿನ್ಯಾಸ, ಫ್ಯಾಷನ್ ವಿನ್ಯಾಸ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಸೃಜನಶೀಲ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ರೂಪಿಸಲಾಗಿದೆ.
ದೇಶ ವಿದೇಶಗಳ ವಿದ್ಯಾರ್ಥಿಗಳಿಗೆ ಸೃಜನಶೀಲ ಕಲೆಗಳಲ್ಲಿ ತಮ್ಮ ಅಧ್ಯಯನ ಮತ್ತು ವೃತ್ತಿಜೀವನವನ್ನು ಮುಂದುವರಿಸಲು ಅವಕಾಶವನ್ನು ನೀಡುತ್ತದೆ, ಮಾ. 15 ರಂದು 11ಗಂಟೆಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 8ನೇ ಮಹಡಿಯ ಸಭಾಂಗಣದಲ್ಲಿ ಈ ನೂತನ ಪದವಿ ಕೋರ್ಸ್‌ಗೆ ಚಾಲನೆ ದೊರೆಯಲಿದೆ. ಯೆನೆಪೋಯ ವಿವಿ ಉಪಕುಲಪತಿ ಡಾ. ಎಂ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಂಬೈ ಎಫ್‌ಐಸಿಸಿಐ ಅಧ್ಯಕ್ಷ ಆಶಿಶ್ ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಚ್ಚಿ ಪ್ರಾಜೆಕ್ಟ್ ಹೆಡ್- ಕ್ರಿಯೇಟಿವ್ ಎಜುಕೇಶನ್ ವರುಣನ್ ಬಾಲಸುಬ್ರಮಣ್ಯಂ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಬಿಎ ಪಬ್ಲಿಕ್ ಪಾಲಿಸಿ ಎಂಬೆಡೆಡ್ ವಿಥ್ ಸಿವಿಲ್ ಸರ್ವಿಸಸ್ ಇದರ ಉದ್ಘಾಟನೆ ಮಾ.23ರಂದು ಬೆಳಗ್ಗೆ 11:00 ಗಂಟೆಗೆ ದೇರಳಕಟ್ಟೆ ದಂತ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಡಾ. ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್, ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು ವಿವಿಯ ಪ್ರೊ.ಪಿ ಎಲ್. ಧರ್ಮ ಪ್ರಧಾನ ಭಾಷಣ ಮಾಡಲಿರುವರು ಎಂದು ಶರೀನ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವೈಐಎಎಸ್‌ಸಿಎಂ ಉಪ ಪ್ರಾಂಶುಪಾಲ ಡಾ.ಜೀವನ್ ರಾಜ್, ಸಂಯೋಜಕರಾದ ಮೊಹಮ್ಮದ್ ಅಲಿ ರೂಮಿ, ಹ್ಯುಮ್ಯಾನಿಟಿಸ್ ಆ್ಯಂಡ್ ಸೋಶಿಯಲ್ ಸೈನ್ಸ್ ವಿಭಾಗದ ಯೋಜನಾ ಸಂಯೋಜಕರಾದ ಡಾ.ಸವಿತಾ, ಎಸ್‌ಡಿಎಸ್‌ನ ಅಸಿಸ್ಟೆಂಟ್ ಮ್ಯಾನೇಜರ್ ನಂದಾದೇವಿ ಕೆ.ವಿ ಉಪಸ್ಥಿತರಿದ್ದರು.