ಕಲಬುರಗಿ ಸಂಸದ ಉಮೇಶ್ ಜಾಧವ್ ಬೆಂಗಾವಲು ವಾಹನ ಪಲ್ಟಿ: ಹಲವರಿಗೆ ಗಾಯ

ಕಲಬುರಗಿ : ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರ ಬೆಂಗಾವಲು ವಾಹನ ಪಲ್ಟಿಯಾದ ಘಟನೆ ಸೊಮವಾರ ರಾತ್ರಿ ಕಲಬುರಗಿ ನಗರದ ಹೊಲವಲಯದ ಸೇಡಂ ರಸ್ತೆಯ ಬಳಿ ವರದಿಯಾಗಿದೆ.
ಸಂಸದ ಡಾ.ಉಮೇಶ ಜಾಧವ ಅವರು ಕಲಬುರಗಿಯಿಂದ ಬೆಂಡಸೂರ ತಾಂಡಾಕ್ಕೆ ಹೋಗುತ್ತಿರುವಾಗ ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಎಸ್ ಆರ್ ಎನ್ ಮಹೇತಾ ಶಾಲೆಯ ಬಳಿಯ ಸ್ಪಿಡ್ ಬ್ರೇಕರ್ ಬಳಿ ಬೆಂಗಾವಲು ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿರುವ ಎ.ಎಸ್.ಐ ಸಲಿಂ, ಚಾಲಕ ಮಾಳಪ್ಪ.ಸಂಸದರ ಅಂಗರಕ್ಷಕ ಹಣಮಂತ ಪೂಜಾರಿ ಅವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸಂಸದ ಡಾ. ಉಮೇಶ ಜಾಧವ ಅವರು ಬೆಂಗಾವಲು ವಾಹನದ ಪೊಲಿಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಿ ನಂತರ ತಮ್ಮ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿಸಿದ್ದಾರೆ.







.jpeg)


