ಬೆಂಗಳೂರು: ಪತ್ನಿ ತಡವಾಗಿ ಎದ್ದೇಳುತ್ತಾಳೆಂದು ಆರೋಪಿಸಿ ಠಾಣೆಗೆ ದೂರು ನೀಡಿದ ಪತಿ

ಬೆಂಗಳೂರು, ಮಾ.13: ಮನೆಯಲ್ಲಿ ಪತ್ನಿ ಮಲಗಿದರೆ ತಡವಾಗಿ ಎದ್ದೇಳುತ್ತಾಳೆ.ಈಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊರ್ವ ಇಲ್ಲಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಮ್ರಾನ್ ಖಾನ್ ಎಂಬಾತ ದೂರು ಸಲ್ಲಿಕೆ ಮಾಡಿದ್ದು, ತನ್ನ ಪತ್ನಿ ಆಯೇಷಾ ರಾತ್ರಿಮಲಗಿದರೆಮಧ್ಯಾಹ್ನ 12-30ವರೆಗೂನಿದ್ದೆಮಾಡುತ್ತಾಳೆ. ಸಂಜೆ ಪುನಃ 5:30ಕ್ಕೆಮಲಗಿದರೆ ರಾತ್ರಿ 9:30ಕ್ಕೆ ಎದ್ದೇಳುತ್ತಾಳೆ. ಕಳೆದ ಐದುವರ್ಷಗಳಿಂದಲ್ಲೂ ಇದೇ ರೀತಿ ಮಾಡುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.
ಅಡುಗೆ ಕೂಡ ಮಾಡುವುದಿಲ್ಲ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ. ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ನಡೆಸಿದ್ದಾಳೆ. ನನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದವರಿಂದ ನರಕಯಾತನೆ ಅನುಭವಿಸಿದ್ದೇನೆ. ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕಮ್ರಾನ್ ಖಾನ್ ದೂರುನೀಡಿದ್ದಾರೆ
Next Story