Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಿಳೆಯರ ಶೇ. 21ರಷ್ಟು ಅಸಹಜ ಸಾವುಗಳಿಗೆ...

ಮಹಿಳೆಯರ ಶೇ. 21ರಷ್ಟು ಅಸಹಜ ಸಾವುಗಳಿಗೆ ಲಿಂಗಾಧಾರಿತ ಹಿಂಸೆ ಸಂಭಾವ್ಯ ಕಾರಣ: ಅಧ್ಯಯನ

14 March 2023 5:02 PM IST
share
ಮಹಿಳೆಯರ ಶೇ. 21ರಷ್ಟು ಅಸಹಜ ಸಾವುಗಳಿಗೆ ಲಿಂಗಾಧಾರಿತ ಹಿಂಸೆ ಸಂಭಾವ್ಯ ಕಾರಣ: ಅಧ್ಯಯನ

ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧೀನದ ಸೇಠ್ ಜಿ.ಎಸ್.ಮೆಡಿಕಲ್ ಕಾಲೇಜು ಮತ್ತು ಕೆಇಎಂ ಸ್ಮಾರಕ ಆಸ್ಪತ್ರೆಯು ನಡೆಸಿದ ಶವಪರೀಕ್ಷೆಗಳ ಅಧ್ಯಯನವು ಅದರ ವಿಧಿವಿಜ್ಞಾನ ವಿಭಾಗದಲ್ಲಿ ನೋಂದಣಿಯಾದ ಮಹಿಳೆಯರ ಅಸಹಜ ಸಾವುಗಳ ಪೈಕಿ ಕನಿಷ್ಠ ಶೇ.21.5ರಷ್ಟು ಸಾವುಗಳು ಶಂಕಿತ ಲಿಂಗಾಧಾರಿತ ಹಿಂಸಾಚಾರದ ಪ್ರಕರಣಗಳು ಎನ್ನುವುದನ್ನು ತೋರಿಸಿದೆ ಎಂದು scroll.in ವರದಿ ಮಾಡಿದೆ.

ಈ ಪೈಕಿ ಕೆಲವನ್ನು ಪೊಲೀಸರು ಆತ್ಮಹತ್ಯೆ ಅಥವಾ ಆಕಸ್ಮಿಕ ಸಾವುಗಳು ಎಂದು ದಾಖಲಿಸಿರುವುದರಿಂದ ಎಲ್ಲ ಪ್ರಕರಣಗಳನ್ನು ಅಪರಾಧಗಳೆಂದು ಪರಿಗಣಿಸಲಾಗಿಲ್ಲ. ವರದಿಯ ಆಧಾರದಲ್ಲಿ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಗಲ್ ಪ್ರಭಾತ ಲೋಧಾ ಅವರು, ಲಿಂಗಾಧಾರಿತ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ವ್ಯವಸ್ಥೆಯೊಂದಕ್ಕೆ ಶಿಫಾರಸುಗಳನ್ನು ರೂಪಿಸಲು ಸಮಿತಿಯೊಂದಕ್ಕೆ ನಿರ್ದೇಶನ ನೀಡಿದ್ದಾರೆ.

ಮೇ 2017 ಮತ್ತು ಎಪ್ರಿಲ್ 2022ರ ನಡುವೆ ಕೆಇಎಂ ಆಸ್ಪತ್ರೆಯು 6,190 ಶವಪರೀಕ್ಷೆಗಳನ್ನು ನಡೆಸಿತ್ತು. ಪರೀಕ್ಷೆಗೊಳಗಾದ 1,467 ಮಹಿಳೆಯರ ಶವಗಳ ಪೈಕಿ 840 ಅಸಹಜ ಸಾವುಗಳ ಪ್ರಕರಣಗಳಾಗಿದ್ದವು. ಈ ಪೈಕಿ 181 ಅಥವಾ ಶೇ.21.5ರಷ್ಟು ಪ್ರಕರಣಗಳಲ್ಲಿ ಲಿಂಗಾಧಾರಿತ ಹಿಂಸಾಚಾರದ ಪುರಾವೆಗಳನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಈ ಮಹಿಳೆಯರ ಪೈಕಿ ಶೇ.75ರಷ್ಟು 15ರಿಂದ 44 ವರ್ಷ ವಯೋಮಾನದ ಗುಂಪಿಗೆ ಸೇರಿದ್ದರು.

ಅಧ್ಯಯನವು ವಿಧಿವಿಜ್ಞಾನ ವಿಶ್ಲೇಷಣೆ,ಗಾಯಗಳ ಸ್ವರೂಪ ಮತ್ತು  ಮಾದರಿ,ಸಾವಿಗೆ ಮುನ್ನ ಬಲಿಪಶುಗಳು ನೀಡಿದ್ದ ಹೇಳಿಕೆಗಳು ಮತ್ತು ಅವರ ಬಂಧುಗಳು ನೀಡಿದ್ದ ಹೇಳಿಕೆಗಳನ್ನು ಆಧರಿಸಿತ್ತು.

ಸಂಶೋಧಕರು ಲಿಂಗಾಧಾರಿತ ಹಿಂಸಾಚಾರದೊಂದಿಗೆ ತಳುಕು ಹಾಕಿರುವ 181 ಸಾವುಗಳ ಪೈಕಿ 86 (ಶೇ.47) ಆತ್ಮಹತ್ಯೆ,85 (ಶೇ.47) ಆಕಸ್ಮಿಕ ಸಾವುಗಳು ಮತ್ತು ಕೇವಲ ಶೇ.10 (ಶೇ.6)ರಷ್ಟು ಸಾವುಗಳು ಆತ್ಮೀಯ ಸ್ನೇಹಿತ, ಪತಿ ಅಥವಾ ಸಂಬಂಧಿ ಒಳಗೊಂಡಿದ್ದ ನರಹತ್ಯೆ ಪ್ರಕರಣಗಳು ಎಂದು ದಾಖಲಾಗಿದ್ದವು.

‘ನರಹತ್ಯೆಗಳ ಸಂಖ್ಯೆ ಹೆಚ್ಚಿರಬಹುದು ಮತ್ತು ಆತ್ಮಹತ್ಯೆ ಅಥವಾ ಆಕಸ್ಮಿಕ ಎಂದು ದಾಖಲಾದ ಹಲವಾರು ಸಾವುಗಳು ವಾಸ್ತವದಲ್ಲಿ ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳಾಗಿವೆ ಎಂದು ನಾವು ನಂಬಿದ್ದೇವೆ ’ ಎಂದು ಕೆಇಎಂ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಹರೀಶ ಪಾಠಕ್ ಹೇಳಿದರು.

181 ಸಾವುಗಳ ಪೈಕಿ 105 (ಶೇ.58) ಸಾವುಗಳು ಸುಟ್ಟ ಗಾಯಗಳಿಂದ ಉಂಟಾಗಿದ್ದರೆ, ಶೇ.20ರಷ್ಟು ಸಾವುಗಳು ನೇಣಿನಿಂದ ಸಂಭವಿಸಿದ್ದವು. ವಿಷಪ್ರಾಶನ ಅಥವಾ ಡ್ರಗ್ ಓವರ್ಡೋಸ್ ಶೇ.16ರಷ್ಟು ಸಾವುಗಳಿಗೆ ಕಾರಣವಾಗಿತ್ತು ಎನ್ನುವುದನ್ನು ಅಧ್ಯಯನವು ಬಹಿರಂಗಗೊಳಿಸಿದೆ.

ನರಹತ್ಯೆಗಳಲ್ಲದೆ, ಸುಟ್ಟ ಗಾಯಗಳು ಮತ್ತು ನೇಣಿನಿಂದ ಸಂಭವಿಸಿದ ಸಾವುಗಳ ವರ್ಗಗಳಲ್ಲಿ ಲಿಂಗಾಧಾರಿತ ಹಿಂಸಾಚಾರವು ಸ್ಪಷ್ಟವಾಗಿ ಕಂಡುಬಂದಿತ್ತು ಎಂದು ಪಾಠಕ್ ತಿಳಿಸಿದರು. ‘ವೈದ್ಯಕೀಯ ದಾಖಲೆಗಳು ಮತ್ತು ಪೇಷಂಟ್ ಕೇಸ್ ಹಿಸ್ಟರಿಯಲ್ಲಿ ಸಂಬಂಧಿಗಳು ಮತ್ತು ಬಲಿಪಶುಗಳ ಹೇಳಿಕೆಗಳ ನಡುವೆ ಅಸಂಗತತೆಗಳನ್ನು ನಾವು ಗಮನಿಸಿದ್ದೇವೆ’ ಎಂದರು.

ಅಧ್ಯಯನವು 181 ಸಾವುಗಳ ಪೈಕಿ ಕನಿಷ್ಠ 114 ಪ್ರಕರಣಗಳಲ್ಲಿ ಸಾವಿಗೆ ಕಾರಣಗಳನ್ನು ಸಂದರ್ಭೋಚಿತಗೊಳಿಸಿದೆ. ಈ ಪೈಕಿ ಶೇ.66.5ರಷ್ಟು ಮಹಿಳೆಯರು ವೈವಾಹಿಕ ಸಮಸ್ಯೆಗಳನ್ನು, ಶೇ.32ರಷ್ಟು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಶೇ.15ರಷ್ಟು ಮಹಿಳೆಯರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ.

share
Next Story
X