ಮಾ.16ರಂದು ಸ್ಪೇಸ್ ವೀಲ್ಸ್-ಮೊಬೈಲ್ ಪ್ಲಾನಿಟೋರಿಯಂ ವೀಕ್ಷಣೆ
ಉಡುಪಿ, ಮಾ.19: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಸಮಿತಿ, ದ.ಕ. ವಿಜ್ಞಾನ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮತ್ತು ಟೆಕ್ನಾಲಜಿ ಪ್ರಮೊಷನ್ ಸೊಸೈಟಿ ಹಾಗೂ ಇಸ್ರೊ ಇವರ ಸಹಭಾಗಿತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಆಶ್ರಯದಲ್ಲಿ ’ಸ್ಪೇಸ್ ವೀಲ್ಸ್ ಮತ್ತು ಮೊಬೈಲ್ ಪ್ಲಾನಿಟೋರಿಯಂ’ ವೀಕ್ಷಣಾ ಕಾರ್ಯಕ್ರಮವು ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮಾ.16ರಂದು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ.
ಸಾರ್ವಜನಿಕರು ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಮತ್ತು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





