ಮಾ. 20ರಿಂದ ಕಂಕನಾಡಿ -ಪಂಪ್‌ವೆಲ್ ರಸ್ತೆಯಲ್ಲಿ ಏಕಮುಖ ಸಂಚಾರ

ಮಂಗಳೂರು, ಮಾ.14: ನಗರದ ಕಂಕನಾಡಿ-ಪಂಪ್‌ವೆಲ್‌ನ್ನು ಸಂಪರ್ಕಿಸುವ ಹಳೆ ರಸ್ತೆಯು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕಂಕನಾಡಿ ವೃತ್ತದಿಂದ ಹಳೆಯ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಪಂಪ್‌ವೆಲ್ ಕಡೆಗೆ ತೆರಳುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಏಕಮುಖ ರಸ್ತೆಯನ್ನಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅದರಂತೆ ಮಾ.20ರಿಂದ ಮುಂದಿನ ಆದೇಶದವರೆಗೆ ಕಂಕನಾಡಿ ವೃತ್ತದಿಂದ ಪಂಪ್‌ವೆಲ್ ಕಡೆಗೆ ಹಳೆಯ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪಳ್ನೀರ್ (ಮದರ್ ಥೆರೆಸಾ ರಸ್ತೆ) ರಸ್ತೆಯಿಂದ ಪಂಪ್‌ವೆಲ್ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳು ಕಂಕನಾಡಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಕರಾವಳಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಪಂಪ್‌ವೆಲ್ ಕಡೆಗೆ ಸಂಚರಿಸಬೇಕು. ಮಂಗಳಾದೇವಿ, ವೆಲೆನ್ಸಿಯಾ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ಕಂಕನಾಡಿ ಜಂಕ್ಷನ್‌ನಲ್ಲಿ ನೇರವಾಗಿ ಕರಾವಳಿ ಜಂಕ್ಷನ್ ಕಡೆಗೆ ಸಂಚರಿಸಿ ಬಳಿಕ ಬಲಕ್ಕೆ ತಿರುಗಿ ಪಂಪ್‌ವೆಲ್ ಕಡೆಗೆ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.